RNI NO. KARKAN/2006/27779|Sunday, December 22, 2024
You are here: Home » breaking news » ಬೈಲಹೊಂಗಲ:ಬಸವ ಕೇಂದ್ರದಿಂದ ನೆರೆಸಂತ್ರಸತ್ತರಿಗೆ ಆಹಾರ ದಾನ್ಯ, ಮನೆಬಳಿಕೆ ವಸ್ತುಗಳ ವಿತರಣೆ

ಬೈಲಹೊಂಗಲ:ಬಸವ ಕೇಂದ್ರದಿಂದ ನೆರೆಸಂತ್ರಸತ್ತರಿಗೆ ಆಹಾರ ದಾನ್ಯ, ಮನೆಬಳಿಕೆ ವಸ್ತುಗಳ ವಿತರಣೆ 

ಬಸವ ಕೇಂದ್ರದಿಂದ ನೆರೆಸಂತ್ರಸತ್ತರಿಗೆ ಆಹಾರ ದಾನ್ಯ, ಮನೆಬಳಿಕೆ ವಸ್ತುಗಳ ವಿತರಣೆ

ಬೈಲಹೊಂಗಲ ಅ 21 : ಸಮಾಜಸೇವೆ ಹಾಗೂ ದಾಸೋಹಕ್ಕೆ ಹೆಸರಾದ ಕಿತ್ತೂರ ನಾಡು 12ನೆಯ ಶತಮಾನದ ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಾಗಿದ್ದು ಇಲ್ಲಿ ವಿಶ್ವಗುರು ಬಸವಣ್ಣನವರು ಕಾಯಕ ಹಾಗೂ ಕಷ್ಠದಲ್ಲಿರುವವರಿಗೆ ದಾಸೋಹ ಮಾಡಬೇಕೆಂಬ ತತ್ವ ಇಂದಿನವರಿಗೂ ಬೆಳದುಬಂದಿದೆ ಅಂತಹ ಸಮಾಜ ಸೇವಾ ಕಾರ್ಯಗಳಲ್ಲಿ ನೇಗಿನಹಾಳ ಗ್ರಾಮದ ಯುವಕರು ಮುಂದೆ ಬಂದಿರುವುದು ಅತ್ಯಂತ ಶ್ಲಾಂಘನೀಯ ಕಾರ್ಯವಾಗಿದೆ ಎಂದು ನೇಗಿನಹಾಳ ಬಸವ ಕೇಂದ್ರದ ಗೌರವಾದ್ಯಕ್ಷ ಬಸವ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಬಸವ ಕೇಂದ್ರ. ಲಿಂಗಾಯತ ಅಭಿವೃದ್ಧಿ ಸಂಸ್ಥೆ, ರಾಷ್ಟ್ರೀಯ ಬಸವ ಸೇನಾ, ಅಕ್ಕಮಹಾದೇವಿ ಮಹಿಳಾ ಸಂಘ ಹಾಗೂ ನೇಗಿನಹಾಳ ಗ್ರಾಮಸ್ಥರಿಂದ ದಿಂದ ಕೊಡಗು ಹಾಗೂ ಕೇರಳದಲ್ಲಿ ಭೀಕರ ಪ್ರವಾಹದಿಂದ ನಿರಾಶ್ರಿತರಾಗಿರುವ ಪ್ರದೇಶಗಳಿಗೆ ಆಹಾರ ದಾನ್ಯ ಹಾಗೂ ದಿನನಿತ್ಯದ ಮನೆಬಳಿಕೆ ಸಾಮಗ್ರಿಗಳ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತೀಯರೆಲ್ಲರೂ ಒಂದೇ ನಮ್ಮ ದೇಶದ ಜನರಿಗೆ ಕಷ್ಟ ಎದುರಾದಾಗ ನಾವೆಲ್ಲರೂ ಮುಂದೆ ಬಂದು ಸಹಾಯ ಮಾಡಬೇಕು ಇದು ಕೇವಲ ಸರಕಾರ ಹಾಗೂ ಅಧಿಕಾರಿಗಳ ಕಾರ್ಯವಷ್ಟೇ ಅಲ್ಲದೇ ಸಾರ್ವಜನಿಕರು ಮುಂದಾಳತ್ವ ವಹಿಸಬೇಕು ಎಂದರು. ನೇಗಿನಹಾಳ ಗ್ರಾಮದಿಂದ ಸುಮಾರು 3000 ರೊಟ್ಟಿ, 4ಕ್ವಿಂಟಾಲ್ ಅಕ್ಕಿ, ಬೆಳೆ, 10ಸೆಟ್ ಪಾತ್ರೆಗಳು, ಬಿಸ್ಕೆಟ್, ಮಹಿಳೆ ಹಾಗೂ ಪುರುಷರಿಗೆ ಸುಮಾರು 50 ಒಳ ಉಡುಪುಗಳು, ಔಷಧಿ ವಿವಿಧ ದಿನಬಳಿಕೆಗೆ ಉಪಯುಕ್ತವಾಗುವ ಸಾಮಗ್ರಿಗಳನ್ನು ಮಡಿವಾಳೇಶ್ವರ ಮಠದಲ್ಲಿ ಸಂಗ್ರಹಿಸಿ ಬೆಳಗಾವಿಯ ಟಿ.ವಿ 9 ಕಛೇರಿಯ ಮೂಲಕ ಕಳುಹಿಸಿಕೊಡಲಾಯಿತ್ತು. ರಾಷ್ಟ್ರೀಯ ಬಸವ ಸೇನಾ ಮುಖಂಡ ನಿಂಗಪ್ಪ ನಾಗನೂರ, ಸಾಗರ ತೋರಣಗಟ್ಟಿ, ನಾಗರಾಜ ಶಿವನಾಯ್ಕರ, ಮಂಜುನಾಥ ಮರಿತಮ್ಮನವರ, ನಾಗರಾಜ ನರಸಣ್ಣವರ, ಮಹಾದೇವ ಮುದ್ದೆನ್ನವರ, ಗದಿಗೆಪ್ಪ ರುಮೋಜಿ, ಪ್ರಕಾಶ ಮರಿತಮ್ಮನವರ, ಈರಪ್ಪ ದೇಶನೂರ, ಮಹೇಶ ಇಂಚಲ, ಸುಬಾಷ ನರಸನ್ನವರ, ಸೋಮನಿಂಗ ತೋಟಗಿ ಮತ್ತಿತ್ತರರು ಆಹಾರ ದಾನ್ಯ ಸಂಗ್ರಹಿಸಿದರು.

Related posts: