RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಸಿದ್ದರಾಮಯ್ಯನವರ ಹೇಳಿಕೆಯಿಂದ ರಾಜ್ಯದ ಕುರುಬರಲ್ಲಿ ಆತಂಕ ಮೂಡಿಸಿದೆ : ಮಾರುತಿ ಮರಡಿ ಮೌರ್ಯ

ಘಟಪ್ರಭಾ:ಸಿದ್ದರಾಮಯ್ಯನವರ ಹೇಳಿಕೆಯಿಂದ ರಾಜ್ಯದ ಕುರುಬರಲ್ಲಿ ಆತಂಕ ಮೂಡಿಸಿದೆ : ಮಾರುತಿ ಮರಡಿ ಮೌರ್ಯ 

ಸಿದ್ದರಾಮಯ್ಯನವರ ಹೇಳಿಕೆಯಿಂದ ರಾಜ್ಯದ ಕುರುಬರಲ್ಲಿ ಆತಂಕ ಮೂಡಿಸಿದೆ : ಮಾರುತಿ ಮರಡಿ ಮೌರ್ಯ

ಘಟಪ್ರಭಾ ಅ 21 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಸಮಾಜಕ್ಕೆ ಎಸ್.ಟಿ ಮೀಸಲಾತಿ ಸಾದ್ಯವಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿರುವುದರಿಂದ ರಾಜ್ಯದ ಕುರುಬರಲ್ಲಿ ಆತಂಕ ಮೂಡದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರಡಿ ಮೌರ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನಿಡಿರುವ ಅವರು ಕುರುಬರನ್ನು ಎಸ್.ಟಿ. ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ದಶಕಗಳಿಂದಲೂ ಹೋರಾಟಗಳು ನಡೆಯುತ್ತಿವೆ. ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶವಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರಗಳಿಗೆ ಅಧಿಕಾರವೂ ಇದೆ. ಬುಡಕಟ್ಟು ಜನಾಂಗದವರಾದ ಕುರುಬರು ಎಸ್.ಟಿ. ಮೀಸಲಾತಿ ಪಡೆಯಲು ಬೇಕಾದಂತಹ ಎಲ್ಲಾ ಗುಣಗಳನ್ನು ಹೊಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಧನಗರ್ ಸಮಾಜದ ಹೋರಾಟವೂ ತೀವ್ರಗತಿಯಿಂದ ಸಾಗುತ್ತಿದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಹಾಲುಮತ ಮಹಾಸಭಾ ಕುರುಬರಿಗೆ ಎಸ್.ಟಿ. ಮಿಸಲಾತಿಗಾಗಿ ಮತ್ತು ಕುರುಬ ಸಮಾಜದ ಮೇಲೆ ನಡೆಯುತ್ತಿರುವ ಅಟ್ರಾಸಿಟಿ ದೌರ್ಜನ್ಯದಿಂದ ಮುಕ್ತಗೊಳಿಸಲು ಸರ್ಕಾರಗಳಿಗೆ ಮನವಿಗಳನ್ನು ಸಲ್ಲಿಸುತ್ತಲೇ ಬರುತ್ತಿದೆ.
ತಮ್ಮ ಸರ್ಕಾರವು ಅಧಿಕಾರದಲ್ಲಿದ್ದಾಗಲೂ ಮನವಿಗಳನ್ನು ಸಲ್ಲಿಸಿದ್ದೆವು. ಸ್ವತಃ ನೀವು ಬೆಳಗಾವಿಯಲ್ಲಿ ಮತ್ತು ಗೃಹ ಕಚೇರಿ ಕೃಷ್ಣದಲ್ಲಿ ಹಾಲುಮತ ಮಹಾಸಭಾದವರ ಜೊತೆ ಚರ್ಚೆ ನಡೆಸಿದ್ರಿ. ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಮಹಾಸಭಾ ಕೈ ಬಿಡುವುದಿಲ್ಲ. ಈಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೂ ಸಹ ಎಸ್.ಟಿ. ಮೀಸಲಾತಿ ಬೇಡಿಕೆಯ ಬಗ್ಗೆ ಮನವಿಯನ್ನು ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಸಹ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿರುತ್ತಾರೆ.
ಸಿದ್ದರಾಮಯ್ಯನವರು ಎಸ್.ಟಿ. ಮೀಸಲಾತಿ ಆಗು – ಹೋಗುಗಳ ಬಗ್ಗೆ ಚರ್ಚೆ ನಡೆಸಬಹುದಿತ್ತು. ಈ ರೀತಿ ಬಹಿರಂಗ ಹೇಳಿಕೆಗಳಿಂದ ರಾಜ್ಯದ ಕುರುಬರಲ್ಲಿ ಆತಂಕ ಮತ್ತು ಅಸಮಾಧಾನ ತರುವಂತಾಗುತ್ತದೆ. ತಾವು ಹಿರಿಯರಾಗಿರುವುದರಿಂದ ಈ ಸಂಬಂಧ ಸೂಕ್ತ ಸಲಹೆ ಮತ್ತು ಸಹಕಾರ ನೀಡಬೇಕೆಂದು ಈ ಮೂಲಕ ಮಾರುತಿ ಮರಡಿ ಮೌರ್ಯ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ಆ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ವೀರಣ್ಣಾ ಮೋಡಿ, ರಾಮೋಜಿ ಮಾಳಗಿ, ತಾಲೂಕಾ ಅಧ್ಯಕ್ಷರಾದ ಗಣೇಶ ಚಿಪ್ಪಲಕಟ್ಟಿ, ತಾಲೂಕಾ ಪ್ರಧಾನ ಕಾರ್ಯದರ್ಶಿಯಾದ ವಿನಾಯಕ ಕಟ್ಟಿಕಾರ, ಶಿವಾನಂದ ಕಾನೋಜಿ, ಲಕ್ಷ್ಮಣ ಆಲಕನೂರ, ಪ್ರಕಾಶ ಪಾಟೀಲ, ಜ್ಞಾನೇಶ್ವರ ಬಂಗೇರ, ಸಿದ್ದು ದೇವರಮನಿ ಸಂಘಟಣೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Related posts: