ಬೆಳಗಾವಿ:ಇಟಗಿ ದೊಡ್ಡ ಕೆರೆಗೆ ಮಲಪ್ರಭಾ ನೀರು ತುಂಬಿಸಲು ಕ್ರಮ: ಶಾಸಕ ಸತೀಶಗೆ ರೈತರ ಮನವಿ
ಇಟಗಿ ದೊಡ್ಡ ಕೆರೆಗೆ ಮಲಪ್ರಭಾ ನೀರು ತುಂಬಿಸಲು ಕ್ರಮ: ಶಾಸಕ ಸತೀಶಗೆ ರೈತರ ಮನವಿ
ಬೆಳಗಾವಿ ಜೂ 10: ಇತ್ತಿಚಿಗೆ ಕೆಲವು ದಿನಗಳ ಹಿಂದೆ ಕಾಂಗ್ರೇಸ ಮುಖಂಡ ನಾಶೀರ ಬಾಗವಾನ ಇಟಗಿ ಗ್ರಾಮದಲ್ಲಿರುವ ದೊಡ್ಡ ಕೆರೆಯ ಹೊಳೆತ್ತುವ ಕಾರ್ಯವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದರು. ಈಗ ಅದೇ ದೊಡ್ಡ ಕೆರೆಗೆ ಮಲಪ್ರಭಾ ನದಿಯಿಂದ ನೀರು ತುಂಬಿಸಲು ತೀವೃ ಕ್ರಮ ಕೈಗೊಳ್ಳಬೇಕೆಂದು ಇಟಗಿ ಗ್ರಾಪಂ ಅಧ್ಯಕ್ಷ ಅಪ್ಪಣ್ಣ ದೊಡಮನಿ ನೇತೃತ್ವದಲ್ಲಿ ಗ್ರಾಮದ ಹಲವು ಮುಖಂಡರು ಶನಿವಾರ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ಸದಸ್ಯ ಬಸವರಾಜ ಸಾಣಿಕೊಪ್ಪ, ಗ್ರಾಪಂ ಸದಸ್ಯರಾದ ಬಸವರಾಜ ತುರಮುರಿ, ಬಾಬು ತುರಮುರಿ ಗ್ರಾಮದ ಹಿರಿಯರು ಹಾಗೂ ರೈತರು ಉಪಸ್ಥಿತರಿದ್ದರ