RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕೊಡಗು ಸಂತ್ರಸ್ತರಿಗೆ ಕರವೇಯಿಂದ ಧನ ಸಹಾಯ

ಗೋಕಾಕ:ಕೊಡಗು ಸಂತ್ರಸ್ತರಿಗೆ ಕರವೇಯಿಂದ ಧನ ಸಹಾಯ 

ಕೊಡಗು ಸಂತ್ರಸ್ತರಿಗೆ ಕರವೇಯಿಂದ ಧನ ಸಹಾಯ
ಗೋಕಾಕ ಅ 25 : ಪ್ರಕೃತಿ ವಿಕೋಪ ಮತ್ತು ಭಾರಿ ಮಳೆಯಿಂದ ನಿರ್ಗತಿಕರಾಗಿರುವ ಕೊಡಗು ಜನರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದಿಂದ ಧನ ಸಹಾಯ ಮಾಡಲಾಯಿತು

ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಸೇರಿದ ಕರವೇ ಕಾರ್ಯಕರ್ತರು ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮತ್ತು ಕಾರ್ಯದರ್ಶಿ ಗಣೇಶ ರೋಕಡೆ ಅವರಿಗೆ ಕಾರ್ಯಕರ್ತರಿಂದ ಸಂಗ್ರಹಿಸಿದ್ದ 10 ಸಾವಿರ ರೂಪಾಯಿಗಳನ್ನು 

ವಿತರಿಸಿದರು

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡ ಕೊಡುಗು ಸಂತ್ರಸ್ತರಿಗೆ ಕರವೇಯಿಂದ ಬೆಂಗಳೂರು ನಗರದಿಂದ 20 ಲಕ್ಷ ರೂ ಮತ್ತು ರಾಜಾದ್ಯಂತ ಎಲ್ಲ ಜಿಲ್ಲೆಗಳಿಂದ ಸುಮಾರು 30 ಲಕ್ಷ ರೂ ಒಟ್ಟು 50 ಲಕ್ಷ ರೂ ಧನ ಸಹಾಯ ನೀಡುತ್ತಿರುವದು ಪ್ರಸಂಶನೀಯ. ಮನಕುಲ ಸಂಕಷ್ಟಕ್ಕೆ ಸಿಲುಕಿದಾಗ ಧಾವಿಸಿ ಅವರ ಕಷ್ಟ ಕಾರ್ಯಪಣ್ಯಗಳಿಗೆ ಸಹಕಾರವಾಗಿ ನಿಲುವದು ಮಾನವನ ಧರ್ಮ ಆ ಪುಣ್ಯ ಕಾರ್ಯದಲ್ಲಿ ನಿರತವಾಗಿರುವ ರಾಜ್ಯದ ಸಕಲ ಜನತೆಯ ಸೇವೆ ಸಾರ್ಥಕ ಎಂದು ಶ್ರೀಗಳು ಹೇಳಿದರು

ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ , ಬಾಳು ಜಡಗಿ , ಸಾಧಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ನಿಜಾಮ ನಧಾಪ , ಬಸವರಾಜ ಗಾಡಿವಡ್ಡರ , ಲಕ್ಕಪ್ಪ ನಂದಿ , ಮಲ್ಲಪ್ಪ ತಲೆಪ್ಪಗೋಳ , ಮುಗುಟ ಪೈಲವಾನ , ರಹೇಮಾನ ಮೋಕಾಶಿ , ರವಿ ಗಾಡಿವಡ್ಡರ , ಹನೀಫ್ ಸನದಿ , ಅಶೋಕ ಗಾಡಿವಡ್ಡರ , ರಾಮಣ್ಣ ಸಣ್ಣಲಗಮನ್ನವರ , ರಾಜು ಕೆಂಚನ್ನಗುಡ್ಡ , ಮಾಂತು ಗುಂಡಕಲ್ಲಿ , ಪ್ರಫುಲ ಹುಕ್ಕೇರಿಮಠ ,ಸೈಯದ ಕಮತ , ಯಶವಂತ ಗಾಡಿವಡ್ಡರ ,ರಮೇಶ ಖಾನಪ್ಪನವರ , ಆನಂದ ಖಾನಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: