RNI NO. KARKAN/2006/27779|Saturday, December 14, 2024
You are here: Home » breaking news » ಬೈಲಹೊಂಗಲ:ಇಷ್ಠಲಿಂಗದಿಂದ ಮಾನಸ್ಸಿಕ ನೆಮ್ಮದಿ ಸಾಧ್ಯ : ಮೃತ್ಯುಂಜಯ ಸ್ವಾಮೀಜಿ

ಬೈಲಹೊಂಗಲ:ಇಷ್ಠಲಿಂಗದಿಂದ ಮಾನಸ್ಸಿಕ ನೆಮ್ಮದಿ ಸಾಧ್ಯ : ಮೃತ್ಯುಂಜಯ ಸ್ವಾಮೀಜಿ 

ಇಷ್ಠಲಿಂಗದಿಂದ ಮಾನಸ್ಸಿಕ ನೆಮ್ಮದಿ ಸಾಧ್ಯ : ಮೃತ್ಯುಂಜಯ ಸ್ವಾಮೀಜಿ
ಬೈಲಹೊಂಗಲ ಅ 25 : ಜೈನ್, ಸಿಖ್ಖ್, ಬೌದ್ಧ, ಇಸ್ಲಾಂ ಹಾಗೂ ಕ್ರಿಸ್ಚಿಯನ್ ಸಮುದಾಯಗಳಲ್ಲಿ ತಮ್ಮ ಸಮಾಜದ ಗುರುಗಳನ್ನು ಸ್ಮರಿಸಿಕೊಳ್ಳಲು ವಿಶೇಷ ಭಕ್ತಿ-ಭಾವದಿಂದ ತಮ್ಮ-ತಮ್ಮ ಆಚರಣೆಗಳನ್ನು ಆಚರಿಸುವ ಹಾಗೆ ಲಿಂಗಾಯತರು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಠವಾಗಿ ಗುರು ಬಸವಣ್ಣನವರು ಇಷ್ಠಲಿಂಗ ನೀಡಿದರು ಹಾಗಾಗಿ ಬಸವಣ್ಣನವರ ಲಿಂಗೈಕ್ಯ ತಿಂಗಳಾದ ಶ್ರಾವಣದಲ್ಲಿ ಲಿಂಗದ ಮಹತ್ವ ತಿಳಿಸಿ ಲಿಂಗಾಯತರಿಗೆ ಸಂಸ್ಕಾರ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಮುರ್ಕೀಭಾಂವಿ ರಸ್ತೆಯಲ್ಲಿನ ಸಾಧುನವರ ಎಸ್ಟೇಟ್‍ನಲ್ಲಿನ ಲಿಂಗಾಯತ ಪಂಚಮಸಾಲಿ ಸಮುದಾಯ ಭವನದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಇಷ್ಠಲಿಂಗ ಪೂಜೆ ಹಾಗೂ ಶಿವಯೋಗ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿ ಮಾತನಾಡಿದರು. ದೇವರನ್ನು ತನ್ನ ಎದೆಯ ಮೇಲೆಯ ಕಟ್ಟಿಕೊಂಡು ಪೂಜಿಸುವ ಏಕೈಕ ಸಂಸ್ಕ್ರತಿ ಲಿಂಗಾಯತರದ್ದು ಇದು ಜಾತಿ-ವರ್ಗ-ವರ್ಣರಹಿತವಾದ ಧರ್ಮಸಹಿತವಾದ ಆಚರಣೆಯಾಗಿದ್ದು ಪ್ರತಿಯೊಬ್ಬರು ಇಷ್ಠಲಿಂಗವನ್ನು ಕಟ್ಟಿಕೊಂಡು ನಿತ್ಯ ಶಿವಯೋಗ ಮಾಡಬೇಕು ಎಂದರು. ಹಲವರು ಯುವಕರಿಗೆ ಇಷ್ಠಲಿಂಗ ದೀಕ್ಷೆ ನೀಡಿದರು. ಲಿಂಗಾಯತ ಪಂಚಮಸಾಲಿ ಘಟಕದ ತಾಲೂಕಾ ಅದ್ಯಕ್ಷ ಶ್ರೀಶೈಲ ಬೋಳಣ್ಣವರ, ಸಂಪಗಾವಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ಬಸವಂ ಪೌಂಡೇಶನ್ ಅದ್ಯಕ್ಷ ಮಹೇಶ ಕೋಟಗಿ, ಬಸವ ಕೇಂದ್ರದ ಅದ್ಯಕ್ಷ ಬಸವರಾಜ ಹುಬ್ಬಳ್ಳಿ, ಎಮ್.ಬಿ ಯರಡಾಲ, ರಾಜಶೇಖರ ಮೂಗಬಸವ, ವಿಜಯಕುಮಾರ ಚನ್ನನವರ, ಚಂದ್ರಶೇಖರ ವನ್ನೂರ, ಮಹಾದೇವಿ ಕೋಟಗಿ, ಕವಿತಾ ಬೆಳಗಾವಿ ಮತ್ತಿತ್ತರರು ಉಪಸ್ಥಿತರಿದ್ದರು.

Related posts: