ಗೋಕಾಕ:ಗೋಕಾಕದ ಘಟಪ್ರಭಾ ನದಿಯಲ್ಲಿ ದಿ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆ
ಗೋಕಾಕದ ಘಟಪ್ರಭಾ ನದಿಯಲ್ಲಿ ದಿ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜಣೆ
ಗೋಕಾಕ ಅ 25 : ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಗೋಕಾಕದ ಘಟಪ್ರಭಾ ನದಿಯಲ್ಲಿ ಶನಿವಾರದಂದು ವಿಸರ್ಜಿಸಲಾಯಿತು.
ನಗರದ ಬಸವೇಶ್ವರ ವೃತ್ತದಿಂದ ಅಸ್ಥಿ ಕಲಶ ಯಾತ್ರೆ ಪ್ರಾರಂಭಗೊಂಡು ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಅಟಲ್ ಜಿ ಅವರಿಗೆ ಶೃದ್ಧಾಂಜಲಿ ಅರ್ಪಿಸಿದರು.
ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸಂಸದ ಸುರೇಶ ಅಂಗಡಿ ಮಾತನಾಡಿ ಅಟಲ್ ಜೀಯವರು ದೇಶ ಕಂಡ ಅಪ್ರತಿಮ ಪ್ರಧಾನಿ,ಅಜಾತಶತ್ರು, ಕವಿ ಹೃದಯಿ ರಾಜಕಾರಣಿಯಾಗಿದ್ದು ಈಗ ಜನಮಾನಸದಲ್ಲೆ ಅಮರರಾಗಿದ್ದಾರೆ. ನಾವು ಇಂದು ಭಾರತ ರತ್ನವನ್ನು ಕಳೆದುಕೊಂಡಿದ್ದೇವೆ. ರಾಷ್ಟ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ ಅಭಿವೃದ್ದಿ ಹರಿಕಾರರಾಗಿದ್ದರು. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ದುರ್ಯೋಧನ ಐಹೊಳೆ, ಪಿ.ರಾಜೀವ್, ಅನೀಲ ಬೆನಕೆ,ಅಭಯ ಪಾಟೀಲ ಹಾಗೂ ಬಿಜಿಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ, ನಗರ ಹಾಗೂ ಗ್ರಾಮೀಣ ಅಧ್ಯಕ್ಷರುಗಳಾದ ಶಶಿಧರ ದೇಮಶೆಟ್ಟಿ, ವೀರುಪಾಕ್ಷಿ ಯಲಿಗಾರ, ಮುಖಂಡರಾದ ಸಂಜಯ ಪಾಟೀಲ, ಅಶೋಕ ಪೂಜಾರಿ, ಈರಣ್ಣಾ ಕಡಾಡಿ, ಶಶಿಕಾಂತ ನಾಯಿಕ, ಅಶೋಕ ಓಸ್ವಾಲ, ಬಸವರಾಜ ಹಿರೇಮಠ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಅಟಲ್ ಜೀಯವರ ಅಭಿಮಾನಿಗಳು ಈ ಚಿತಾಭಸ್ಮ ವಿಸರ್ಜನೆ ಕಾರ್ಯದಲ್ಲಿ ಭಾಗಿಯಾಗಿದ್ದರು.