ಗೋಕಾಕ:ಕೊಡಗು ನಿರಾಶ್ರಿತರಿಗೆ ಸ್ವಾಭಿಮಾನಿ ಬಣದಿಂದ ಸೀರೆ ವಿತರಣೆ
ಕೊಡಗು ನಿರಾಶ್ರಿತರಿಗೆ ಸ್ವಾಭಿಮಾನಿ ಬಣದಿಂದ ಸೀರೆ ವಿತರಣೆ
ಗೋಕಾಕ ಅ 28 : ಭಾರಿ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತವಾಗಿರುವ ಕೊಡಗು ಮತ್ತು ಮಡಿಕೇರಿ ಜನತೆಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಬೆಳಗಾವಿ ಮಹಿಳಾ ಜಿಲ್ಲಾ ಘಟಕದ ಕಾರ್ಯಕರ್ತರಿಂದ ಸೀರೆಗಳನ್ನು ವಿತರಿಸಲಾಯಿತು
ಮಂಗಳವಾರದಂದು ಮಹಿಳಾ ಜಿಲ್ಲಾಧ್ಯಕ್ಷೆ ಯಶೋಧಾ ಬಿರಡಿ ಅವರ ನೇತೃತ್ವದಲ್ಲಿ ಕೊಡಗು ಸಂತ್ರಸ್ತರನ್ನು ಬೇಟ್ಟಿಯಾದ ಕಾರ್ಯಕರ್ತರು ಸುಮಾರು 500 ಕ್ಕೂ ಹೆಚ್ಚು ಸೀರೆಗಳನ್ನು ವಿತರಿಸಿ ಮಾನವೀಯತೆ ಮೆರೆದರು
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕಿ ಸತ್ಯವ್ವ ತಹಶೀಲ್ದಾರ್ , ಭರತೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು