RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು

ಗೋಕಾಕ:ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು 

ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು

ಗೋಕಾಕ ಜೂ 11: ರಾಜ್ಯಾದ್ಯಂತ ಇಂದು ಸಿ ಗ್ರೂಪ್ (non tec) ಹುದ್ದೆಗಳಿಗೆ ಕೆಪಿಎಸ್ಸಿ ಯಿಂದ ಲಿಖೀತ ಪರೀಕ್ಷೆಗಳು ನಡೆದಿವೆ ಈ ಸಾರಿ ಮಾತ್ರ ರಾಜ್ಯಾದ್ಯಂತ ಇದಕ್ಕೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ ಎಂತಲೇ ಹೇಳಬಹುದು

ಗೋಕಾಕ ನಗರದಲ್ಲಿ ಸುಮಾರು 13 ಕೇಂದ್ರಗಳಲ್ಲಿ ಒಟ್ಟು 5167 ಪರೀಕ್ಷಾರ್ಥಿಗಳು ಕೆಪಿಎಸ್ಸಿ ಸಿ ಗ್ರೂಫ್ ಪರೀಕ್ಷೆಯನ್ನು ಬರೆಯಬೇಕಾಗಿತ್ತು ಆದರೆ ಪರೀಕ್ಷೆಗೆ ಹಾಜರಾದವರ ಸಂಖ್ಯೆ 987 ಮಾತ್ರ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿಧ್ಯಾರ್ಥಿಗಳಲ್ಲಿ ಇದ ಉತ್ಸಾಹ ಪರೀಕ್ಷೆ ಸಂದರ್ಭದಲ್ಲಿ ಮಾಯವಾಗಿದೆ ಎಂದು ಹೇಳಲಾಗುತ್ತಿದೆ
ಹಾವೇರಿ , ಗದಗ, ಕಾರವಾರ, ಕೊಪ್ಪಳ, ಬೀದರ, ಬಾಗಲಕೋಟೆ, ವಿಜಯಪುರ ಸೇರಿದಂತೆ ದೂರದ ಜಿಲ್ಲೆಯ ವಿಧ್ಯಾರ್ಥಿಗಳನ್ನು ಗಡಿ ಜಿಲ್ಲೆ ಬೆಳಗಾವಿಯ ವಿವಿದ ತಾಲೂಕಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಕೇಂದ್ರಗಳನ್ನು ಹಂಚಿದ್ದರಿಂದ ಹಾಜರಾತಿ ಪ್ರಮಾಣದಲ್ಲಿ ಭಾರಿ ಕುಸಿತ ಕಂಡು ಬಂದಿದೆ ಎಂದು ಕೆಪಿಎಸ್ಸಿ ಪರೀಕ್ಷೆಯ ಜವಾಬ್ದಾರಿ ನೋಡಿ ಕೋಳುತ್ತಿರುವ ನೋಡಲ ಅಧಿಕಾರಿ ಒಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ನಗರದ ಎ.ಕೆ.ಎ ಕಾಲೇಜಿನಲ್ಲಿ 13 ಬ್ಲಾಕ್ ಗಳಲ್ಲಿ ಒಟ್ಟು 256 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗ ಬೇಕಾಗಿತ್ತು ಆದರೆ ಕೇವಲ 54 ಪರೀಕ್ಷಾರ್ಥಿಗಳು ಮಾತ್ರ ಹಾಜರಾಗಿ ಪರೀಕ್ಷೆ ಬರೆಯುತ್ತಿದ್ದಾರೆಂದು ತಿಳಿದು ಬಂದಿದೆ.

ಒಟ್ಟಾರೆ ಅರ್ಜಿ ಸಲ್ಲಿಸಿದ ಪ್ರಮಾಣದಷ್ಟು ಜನ ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರ ಆಗಿಲಾ ಇದರಿಂದ ಕೆಪಿಎಸ್ಸಿ ಬೋರ್ಡ್ ಗೆ ಭಾರಿ ಪ್ರಮಾಣದಲ್ಲಿ ಲಾಭವಾದಂತಾಗಿದೆ

Related posts: