ಗೋಕಾಕ:ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ: ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ
ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ: ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ
ಗೋಕಾಕ ಅ 29 : ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೊಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ ಹೇಳಿದರು.
ಅವರು ಬುಧವಾರದಂದು ನಗರದ ಪ್ರೋಪೇಸರ್ ಕಾಲನಿಯ ಸಿದ್ಧಿ ವಿನಾಯಕ ಸಭಾಭವನದಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೊಡಲಸಂಗಮ, ಪಂಚಮಸಾಲಿ ಲಿಂಗಾಯತ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಹಾಗೂ ಪಂಚಮಸಾಲಿ ಲಿಂಗಾಯತ ತಾಲೂಕಾ ಘಟಕ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಇಷ್ಟಲಿಂಗ ಮಹಾಪೂಜಾ ಹಾಗೂ ಇಷ್ಟಲಿಂಗ ದೀಕ್ಷಾ ಅಭಿಯಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಭಕ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆಯಲು ಏಕೈಕ ಸರಳ ಮಾರ್ಗ ಇಷ್ಟಲಿಂಗ ಪೂಜೆಯಾಗಿದೆ. ಇಷ್ಟಲಿಂಗ ನಮ್ಮಲ್ಲಿರುವ ದೇವರನ್ನು ನೋಡುವ ಸಾಧನವಾಗಿದೆ. ಇಷ್ಟಲಿಂಗ ಪೂಜೆ ಬೇಧಭಾವ ಇಲ್ಲ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಇಷ್ಟಲಿಂಗ ಪೂಜಿಸುವ ಸ್ವತಂತ್ರವನ್ನು ಎಲ್ಲರಿಗೂ ನೀಡಿದ್ದಾರೆ. ಯಾವುದೇ ಮೂಢನಂಬಿಕೆಗೆ ಮಾರು ಹೋಗದೇ ಇಷ್ಟಲಿಂಗ ಪೂಜಿಸಿ ಸಂಸ್ಕಾರವಂತರಾಗಿ ಸಮಸ್ಯೆಗಳಿಂದ ಮುಕ್ತಿ ಹೊಂದಿರೆಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಸಿ.ಮಾಸ್ತಿಹೊಳಿ, ಎಂ.ಎಸ್.ವಾಲಿ, ಎಂ.ಎಫ್.ಬೆಳವಿ, ಡಾ| ಆರ್.ಬಿ.ಪಟಗುಂದಿ, ಎಂ.ಬಿ.ಕಡ್ಲಿ, ಎಂ.ಎನ್.ಚೂಟಪ್ಪಗೋಳ, ಎಸ್.ಬಿ.ಕೊಂಗಾಲಿ, ಸಾಯಿ ವಿದ್ಯಾ ಚೇತನ ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದ್ದರು.
ಶೈಲಾ ಕೊಕ್ಕರಿ ಸ್ವಾಗತಿಸಿ ನಿರೂಪಿಸಿದರು.