RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ

ಗೋಕಾಕ:ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ 

ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ

ಬೆಟಗೇರಿ ಅ 31 : ಮಹಾತ್ಮರ ಹಾಗೂ ಶರಣರ ವಾಣಿ ಶ್ರವಣ ಮಾಡುವುದರಿಂದ ಪ್ರತಿ ಮನುಷ್ಯನಲ್ಲಿ ಆತ್ಮಜ್ಞಾನ ಸ್ಪರ್ಶವಾಗಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಹೇಳಿದರು.
ಸಮೀಪದ ಗೋಸಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಗುರುವಾರ ಆ.30 ರಂದು ನಡೆದ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ, ಶ್ರೀಗಳಿಗೆ ಪಾದಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಬೇಕು ಎಂದರು.
ಅಂದು ಬೆಳಗ್ಗೆ 8 ಗಂಟೆಗೆ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಓಂಕಾರ ಸಪ್ತಾಹ ಸಕಲ ಪೂಜೆ ನೆರವೇರಿಸಿ ಓಂಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಯಬಾಗ ತಾಲೂಕಿನ ನಂದಿಕುರಳಿಯ ಮಹಾದೇವಪ್ಪ ಪೂಜೇರಿ ಅವರಿಂದ ಸಾಯಂಕಾಲ 6 ಗಂಟೆಗೆ ಪ್ರವಚನ ಕಾರ್ಯಕ್ರಮ ಜರುಗಿತು. ಸ್ಥಳೀಯ ಬಲಭೀಮ ದೇವಸ್ಥಾನದಲ್ಲಿ ಮಹಾಪ್ರಸಾದ ನಡೆಯಿತು. ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಶ್ರೀ ಗುರು ವಚನೋಪದೇಶವನಾಲಿಸಿದಾಗಳಹುದುನರರಿಗೆ ಮುಕುತಿ ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ನಡೆಯಿತು.
ಸ್ಥಳೀಯರಿಂದ ನಿರಂತರ ಶಿವನಾಮ ಸ್ಮರಣೆ: ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಗುರುವಾರ ಆ.30 ರಿಂದ ಸೆ.3 ರ ತನಕ ಸತತ ಐದು ದಿನಗಳ ಕಾಲ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರಯುಕ್ತ ದಿನದ ಹಗಲು ವೇಳೆ ಗ್ರಾಮದ ಒಂದು ಓಣಿಯ ಸ್ಥಳೀಯರು, ರಾತ್ರಿ ವೇಳೆ ಒಂದು ಓಣಿಯ ಸ್ಥಳೀಯರು ಹೀಗೆ ನಿರಂತರ ಐದು ದಿನಗಳ ವರೆಗೆ ಗ್ರಾಮದ 12 ಓಣಿಯ ವಿಭಾಗಗಳನ್ನಾಗಿಸಿಕೊಂಡು ಓಂಕಾರ (ಓಂ ನಮ: ಶಿವಾಯ) ನಾಮಸ್ಮರಣೆಯ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ, ವೈಭವದೊಂದಿಗೆ ಶಿವ ನಾಮಸ್ಮರಣೆ, ಶಿವ ಭಜನೆ ಮಾಡುತ್ತಿರುವದು ಸ್ಥಳೀಯರ ವಿಶೇಷ ಸಂಗತಿಯಾಗಿದೆ.
ಇಂದಿನ ಕಾರ್ಯಕ್ರಮ : ಆ.31 ರಂದು ಸಂಜೆ 7 ಗಂಟೆಗೆ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಅವರ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿ.. ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ರಾಜಕೀಯ ಮುಖಂಡರು, ಇಲ್ಲಿಯ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮದ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು. ಭಕ್ತರು, ಇತರರು ಇದ್ದರು.

Related posts: