RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ

ಗೋಕಾಕ:‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ 

‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ
ಕಲ್ಲೋಳಿ ಅ 31 : ಸಂಸ್ಕಾರ ಸಂಸ್ಕøತಿಯು ತಾಯಿಯ ಮಮತೆ, ಮಮಕಾರ ವಾತ್ಸಲ್ಯದಿಂದ ದೊರೆಯುತ್ತದೆ. ಪಾಶ್ಚಿಮಾತ್ಯ ಸಂಸ್ಕøತಿಯನ್ನು ಇಂದಿನ ಜನರು ಮೈಗೂಡಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಮನುಷ್ಯನಿಗೆ ಕನಿಷ್ಠ ಸಾಮಾನ್ಯ ಜ್ಞಾನವು ಇಲ್ಲದಂತಾಗಿ ಅಮಾನವೀಯತೆಯಿಂದ ತನ್ನ ಜೀವನ ಹಾಳುಮಾಡಿಕೊಳ್ಳುತ್ತಿದ್ದಾನೆ ಎಂದು ರಬಕವಿಯ ಜಾನಪದ ಕಲಾವಿದ ಪ್ರೊ ಶೀಕಾಂತ ಕೆಂಧೂಳಿ ನುಡಿದರು.

ಇವರು ಕಲ್ಲೋಳಿಯ ಎಸ್.ಆರ್.ಇ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡೆ, ಸಂಸ್ಕøತಿ ಮತ್ತು ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ಸರ್ವಾಂಗೀಣ ಪ್ರಗತಿ ಕಾಣಬೇಕು ಎಂದರು.

ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಬಿ.ಬೆಳಕೂಡ ಮಾತನಾಡಿ ವಿದ್ಯಾರ್ಥಿಗಳು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಶ್ರೀ ಬಿ.ಎಸ್.ಕಡಾಡಿಯವರು ಪಾರಿಜಾತ ನಾಟಕದ ಆಶಯದೊಂದಿಗೆ ವಿದ್ಯಾರ್ಥಿಗಳು ಆಧ್ಯಾತ್ಮಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಪಾಟೀಲ ಇವರು ಮಾತನಾಡಿ ವಿದ್ಯಾರ್ಥಿಗಳು ನಮ್ಮ ಮಹಾವಿದ್ಯಾಲಯದ ಆಸ್ತಿ. ತಾವುಗಳು ಶ್ರಮವಹಿಸಿ ಅಭ್ಯಾಸ ಮಾಡಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು. ತಮ್ಮ ಅಧ್ಯಯನಕ್ಕೆ ಅವಶ್ಯಕವಾದ ಎಲ್ಲ ಸೌಕರ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ಸದಾ ಕಂಕಣಬದ್ಧವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸದ್ಭಾವನಾ ದಿನದ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೂಡಲಗಿ ತಾಲೂಕ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಎಸ್.ಗೋರೋಶಿ, ಶ್ರೀ ಸಾತಪ್ಪಾ ಖಾನಾಪೂರ, ಮಲ್ಲಪ್ಪ ಕುರಬೇಟ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಸುರೇಖಾ ಗಿಡ್ಡವ್ವಗೋಳ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಕುಮಾರಿ ಸುಧಾ ಕಮತ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಡಿ.ಎಸ್.ಹುಗ್ಗಿ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ಕೆ.ಎಸ್.ಪರವ್ವಗೋಳ ನಿರೂಪಿಸಿದರು. ಪ್ರೊ. ಎಸ್.ಎಂ.ನಿಂಗನೂರ ವಂದಿಸಿದರು.

Related posts: