ಗೋಕಾಕ:ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ : ಶ್ರಿ ಬಸವರಾಜ ಹಿರೇಮಠ
ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ : ಶ್ರಿ ಬಸವರಾಜ ಹಿರೇಮಠ
ಗೋಕಾಕ ಅ 31 : ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ ಎಂದು ಕಪರಟ್ಟಿ-ಕಳ್ಳಿಗುದ್ದಿ ಗ್ರಾಮದ ಶ್ರೀ ಗುರು ಮಹಾದೇವ ಆಶ್ರಮದ ಶ್ರಿ ಬಸವರಾಜ ಹಿರೇಮಠ ಹೇಳಿದರು.
ಅವರು ಗುರುವಾರದಂದು ಇಲ್ಲಿಯ ಗುರುವಾರ ಪೇಟೆಯ ಶ್ರೀ ಕಾಡಸಿದ್ದೇಶ್ವರಮಠದಲ್ಲಿ ತಾಲೂಕಿನ ಕಪರಟ್ಟಿ-ಕಳ್ಳಿಗುದ್ದಿ ಗ್ರಾಮದ ಶ್ರೀ ಗುರು ಮಹಾದೇವ ಆಶ್ರಮ ಹಾಗೂ ನಮಸ್ಕಾರ ಕಲಾ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಇತ್ತಿಚಿಗೆ ಆಯ್ಕೆಗೊಂಡ ದಿ.ಗೋಕಾಕ ಅರ್ಬನ್ ಕೋ.ಆಪ್.ಕ್ರೇಡಿಟ್ ಬ್ಯಾಂಕ ಲಿ,ನ ಆಡಳಿತ ಮಂಡಳಿ ಸದಸ್ಯರುಗಳಿಗೆ ಸತ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಮಹಾತ್ಮರ ಆದರ್ಶಗಳನ್ನು ನಾವೆಲ್ಲರೂ ಆಚರಣೆಗೆ ತರಬೇಕು. ಪರಸ್ಪರ ಸಹಕಾರ, ಪ್ರೀತಿ ವಿಶ್ವಾಸದಿಂದ ಬದುಕಿದರೆ ಬದುಕು ಸುಂದರವಾಗುತ್ತದೆ. ನೂತನ ಸದಸ್ಯರು ಸೇವಾಭಾವದಿಂದ ಕಾರ್ಯ ನಿರ್ವಹಿಸಿ ಜನತೆಯ ಆರ್ಥಿಕ ಅಭಿವೃದ್ದಿಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರುಗಳಾದ ಎಂ.ಡಿ.ಚುನಮರಿ,ಜಯಾನಂದ ಮುನವಳ್ಳಿ, ಬಸವರಾಜ ಕಲ್ಯಾಣಶೆಟ್ಟಿ, ಸೋಮಶೇಖರ ಮಗದುಮ್, ವೀರಣ್ಣ ಬಿದರಿ, ಶೋಭಾ ಕುರುಬೇಟ, ಶಾಂತಾದೇವಿ ಘೋಡಗೇರಿ, ದುಂಡು ಬಿದರಿ,ಅಶೋಕ ಹೆಗ್ಗಣ್ಣವರ, ಸಿ.ಬಿ.ತಾರಳಿ, ಚಂದ್ರಕಾಂತ ಕುರುಬೇಟ ಇವರನ್ನು ಸತ್ಕರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ| ರಾಜೇಂದ್ರ ಸಣ್ಣಕ್ಕಿ, ಡಾ| ಸಂಜಯ ಹಿರೇಮಠ, ಆನಂದ ಗೋಟಡಕಿ, ಪ್ರಶಾಂತ ಕುರುಬೇಟ, ದಿಲೀಪ ಮಜಲಿಕರ ಇದ್ದರು.