ಕರ್ನಾಟಕ ಬಂದಗೆ ಸಹಕರಿಸಿ: ಕಾಶೀಮ ಹಟ್ಟಿಹೊಳಿ
ಬೆಳಗಾವಿ ಜೂ 11: ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ ಹಾಗೂ ಕರ್ನಾಟಕ ವಿಶ್ವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಅಯುಬ ಪಿರಜಾದೆ ಅವರ ನೇತೃತ್ವದ ಕನ್ನಡಪರ ಸಂಘಟಣೆಗಳ ಒಕ್ಕೂಟದ ಆಶ್ರಯದಲ್ಲಿ ಬರುವ ದಿ.12 ರಂದು ಕರೆ ನೀಡಲಾದ ಕರ್ನಾಟಕ ಬಂದನಲ್ಲಿ ರಾಜ್ಯದ ರೈತರು, ವ್ಯಾಪಾರಸ್ಥರು, ಸಾರ್ವಜನಿಕರು ಪಾಲ್ಗೋಂಡು ಸಹಕರಿಸಬೇಕೆಂದು ಕರ್ನಾಟಕ ವಿಶ್ವನಿರ್ಮಾಣ ಸೇನೆ ರಾಜ್ಯ ಯುವಘಟಕದ ಅಧ್ಯಕ್ಷ ಕಾಶೀಮ ಹಟ್ಟಿಹೊಳಿ ಮನವಿ ಮಾಡಿಕೊಂಡಿದ್ದಾರೆ.
ಅವರು ಈ ಕುರಿತು ರವಿವಾರದಂದು ಪತ್ರಿಕಾ ಪ್ರಕಟಣೆ ನೀಡಿ, ಉತ್ತರ ಕರ್ನಾಟಕದ ಜೀವನದಿ ಮಲಪ್ರಭಾ ನದಿಯ ಕಳಸಾ ಬಂಡೂರಿ ಯೋಜನೆ, ಮೇಕೆದಾಟು ಯೋಜನೆ, ಬಯಲು ಸೀಮೆ ಕುಡಿಯುವ ನೀರು ಯೋಜನೆಗಳು ಜಾರಿಗೋಳಿಸಬೇಕು. ತಿವೃ ಬರಗಾಲದಿಂದ ತತ್ತರಿಸಿರುವ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಳಗಾವಿ ಗಡಿಯಲ್ಲಿ ಎಮ್.ಇ.ಎಸ್ ಸಂಘಟನೆಯನ್ನು ನೀಷೆಧಿಸಬೇಕು ಹಾಗೂ ನಾಡದ್ರೋಹಿ ಕೃತ್ಯ ಎಸಗುವರನ್ನು ಗಡಿಪಾರು ಮಾಡಬೇಕು ಎಂದು ವಿರೋಧಿಸಿ ಕರ್ನಾಟಕ ಬಂದಗೆ ಕರೆ ನೀಡಲಾಗಿದ್ದು, ಇದಕ್ಕೆ ರಾಜ್ಯದ ರೈತಪರ ಸಂಘಟಣೆಗಳು ಕೂಡಾ ಬೆಂಬಲಿಸಿವೆ. ಕಾರಣ ರಾಜ್ಯದ ಮತ್ತು ಬೆಳಗಾವಿ ಜಿಲ್ಲೆಯ ಜನತೆ ಶಾಂತಿಯುತವಾಗಿ ಕರ್ನಾಟಕ ಬಂದಗೆ ಬೆಂಬಲಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ದಿ.12 ರಂದು ಬೆಳಗಾವಿ ಜಿಲ್ಲೆಯ ಜನತೆ ಹಾಗೂ ಕನ್ನಡಪರ ಸಂಘಟಣೆಯ ಪದಾಧಿಕಾರಿಗಳು ಮತ್ತು ರೈತಪರ ಹೋರಾಟಗಾರರು ಬೆಳಿಗ್ಗೆ 9.00ಗಂಟೆಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೆರಬೇಕು ತದನಂತರ ಕಿತ್ತೂರ ರಾಣಿ ಚೆನ್ನಮ್ಮಾ ವೃತ್ತದಿಂದ ಶಾಂತಯುತವಾದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವದು.
ಭಾವಚಿತ್ರ:
ಕರ್ನಾಟಕ ವಿಶ್ವನಿರ್ಮಾಣ ಸೇನೆ ರಾಜ್ಯ ಯುವಘಟಕದ ಅಧ್ಯಕ್ಷ ಕಾಶೀಮ ಹಟ್ಟಿಹೊಳಿ.