ಗೋಕಾಕ:ಉಪ್ಪಾರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ
ಉಪ್ಪಾರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ
ಗೋಕಾಕ ಅ 31 : ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ಶುಕ್ರವಾರದಂದು ಸಂಘದ ಕಾರ್ಯಾಲಯದಲ್ಲಿ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅವಿರೋಧ ಆಯ್ಕೆ ಜರುಗಿತು.
ಅಧ್ಯಕ್ಷರಾಗಿ ಸಿದ್ದಪ್ಪ ಖಿಚಡಿ ಹಾಗೂ ಉಪಾಧ್ಯಕ್ಷರಾಗಿ ಸಾಂವಕ್ಕ ನಂದಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಎಲ್.ಜಿ.ನಾಯ್ಕರ ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳಾದ ಸುಭಾಸ ಬಂಡಿ, ರಮೇಶ ತಿಗಡಿ, ಲಕ್ಷ್ಮಣ ಆಡಿನ, ಹಣಮಂತ ಕಡಕೋಳ, ರುದ್ರಪ್ಪ ವ್ಯಾಪಾರಕಿ, ಸಿದ್ದಪ್ಪ ಕೊಳವಿ, ಸಂತೋಷ ಚಿಗದನ್ನವರ, ಭರಮಪ್ಪ ಹರಿಜನ, ಮಾರುತಿ ಮಜ್ಜಗಿ, ರಾಮವ್ವ ಬೂದಿಗೊಪ್ಪ, ಮುಖಂಡರಾದ ಯಲ್ಲಪ್ಪ ಬೂದಿಗೊಪ್ಪ, ಹಣಮಂತ ದುರ್ಗನ್ನವರ, ಹಣಮಂತ ಖಿಚಡಿ, ನಾರಾಯಣ ಮೂಡಲಗಿ, ಬಸಪ್ಪ ಹೊನಕುಪ್ಪಿ, ಚನ್ನಮಲ್ಲ ತಿಗಡಿ, ರಂಗಪ್ಪ ನಂದಿ ಇದ್ದರು.