ಗೋಕಾಕ:ಅರ್ಬನ್ ಬ್ಯಾಂಕಿಗೆ ಬಸವರಾಜ ಕಲ್ಯಾಣಶೆಟ್ಟಿ , ದುಂಡಪ್ಪ ಬಿದರಿ ಅವಿರೋಧ ಆಯ್ಕೆ
ಅರ್ಬನ್ ಬ್ಯಾಂಕಿಗೆ ಬಸವರಾಜ ಕಲ್ಯಾಣಶೆಟ್ಟಿ , ದುಂಡಪ್ಪ ಬಿದರಿ ಅವಿರೋಧ ಆಯ್ಕೆ
ಗೋಕಾಕ ಸೆ 1 : ಇಲ್ಲಿಯ ಪ್ರತಿಷ್ಠಿತ ದಿ. ಅರ್ಬನ್ ಕೋ-ಆಪ್. ಕ್ರೆಡಿಟ್ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಶನಿವಾರದಂದು ಸಂಘದ ಕಾರ್ಯಾಲಯದಲ್ಲಿ ಅವಿರೋಧ ಆಯ್ಕೆ ಜರುಗಿತು.
ಅಧ್ಯಕ್ಷರಾಗಿ ಬಸವರಾಜ ಕಲ್ಯಾಣಶೆಟ್ಟಿ, ಉಪಾಧ್ಯಕ್ಷರಾಗಿ ದುಂಡಪ್ಪ ಬಿದರಿ ಅವರು ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಸುರೇಶ ಬಿರಾದಾರ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರುಗಳಾದ ಜಯಾನಂದ ಮುನವಳ್ಳಿ, ವೀರಣ್ಣ ಬಿದರಿ, ಚಿಂತಾಮಣಿ ತಾರಳಿ, ಸೋಮಶೇಖರ ಮಗದುಮ್ಮ, ಮಲ್ಲಿಕಾರ್ಜುನ ಚುನಮರಿ, ಶೋಭಾ ಕುರಬೇಟ, ಶಾಂತಾದೇವಿ ಘೋಡಗೇರಿ, ಅಶೋಕ ಹೆಗ್ಗಣ್ಣವರ, ಚಂದ್ರಕಾಂತ ಕುರಬೇಟ, ಸುಧೀರ ಅಂಕಲಿ, ಪ್ರಕಾಶ ಮಡೆಪ್ಪಗೋಳ, ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಪಾಟೀಲ ಇದ್ದರು.