ಗೋಕಾಕ:ಗ್ರಾಮಸ್ಥರಿಂದ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಗ್ರಾಮಸ್ಥರಿಂದ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಬೆಟಗೇರಿ ಸೆ 3 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪಾಂಡುರಂಗ ಮಂದಿರದಲ್ಲಿ ರವಿವಾರ ಸೆ.2 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿಯ ಪಾಂಡುರಂಗ ದೇವಸ್ಥಾನದಲ್ಲಿರುವ ವಿಠ್ಠಲ-ರುಕ್ಮಿಣಿ ಗದ್ಗುಗೆಗೆ ಹಾಗೂ ಶ್ರೀ ಕೃಷ್ಣನ ಭಾವ ಚಿತ್ರಕ್ಕೆ ಬೆಳಗ್ಗೆ 6 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಅಭಿಷೇಕ, ಮಹಾಪೂಜೆ, ಪುರಜನರಿಂದ ಪೂಜೆ, ಪುನಸ್ಕಾರ ಹಾಗೂ ಮೊಸರಿನ ಮಡಿಕೆ ಒಡೆಯುವ, ಸುಮಂಗಲೆಯರಿಂದ ಶ್ರೀಕೃಷ್ಣ ತೊಟ್ಟಿಲೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ಜರುಗಿತು.
ಸ್ಥಳೀಯ ಹಲವಾರು ಜನ ಬಾಲಕರು, ಬಾಲಕಿಯರು ಶ್ರೀಕೃಷ್ಣನ ಮತ್ತು ರಾಧೆಯ ವೇಷಭೂಷಣ ಹಾಕಿಕೊಂಡು ಎಲ್ಲರ ಗಮನ ಸೆಳೆದರು. ನಗದು, ಬಟ್ಟೆ ಬರೆಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡಲಾಯಿತು. ಇಲ್ಲಿಯ ನೂರಾರು ಜನ ಬಾಲಕ-ಬಾಲಕಿಯರು, ಯುವಕ- ಯುವಕಿಯರು, ಮಹಿಳೆಯರು, ಪುರುಷರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.