ಅಳ್ನಾವಾರ :ವಿದ್ಯುತ್ ತಗುಲಿ ವ್ಯಕ್ತಿ ಸಾವು: ರೊಚ್ಚಿಗೆದ್ದ ಜನರಿಂದ ಅಳ್ನಾವರ ಆಸ್ಪತ್ರೆ ಪುಡಿ ಪುಡಿ.
ವಿದ್ಯುತ್ ತಗುಲಿ ವ್ಯಕ್ತಿ ಸಾವು: ರೊಚ್ಚಿಗೆದ್ದ ಜನರಿಂದ ಅಳ್ನಾವರ ಆಸ್ಪತ್ರೆ ಪುಡಿ ಪುಡಿ.
ಅಳ್ನಾವಾರ ಜೂ 11: ಧಾರವಾಡ ಜಿಲ್ಲೆಯ ಅಳ್ನಾವಾರ ನಗರದ ಅನ್ವರ ಹುಸೇನ ಬಾಳೆಕುಂದ್ರಿ (೩೦) ಎಂಬ ಯುವಕ ಮನೆಯಲ್ಲಿನ ನೀರಿನ ಮೋಟಾರ್ ಶಾರ್ಟ್ ಸರ್ಕಿಟ್ ಆಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಗಾಯಾಳುಗೆ ಅಳ್ನಾವರದ ಸರ್ಕಾರಿ ಆಸ್ಪತ್ರೆಗೆ ತಕ್ಷಣ ದಾಖಲಿಸಿದಾದರು ವೈದ್ಯರ ಇಲ್ಲದೆ ಇರುವುದರಿಂದ ಹಾಗೂ ಉಳಿದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಿ ನಗರದ ಜನತೆ ರೊಚ್ಚಿಗೆದ್ದು ಆಸ್ಪತ್ರೆಯ ಸಾಮಗ್ರಿಗಳನ್ನು ಪುಡಿ ಪುಡಿ ಮಾಡಿದ್ದಾರೆ.
ಈ ಘಟನೆ ಕುರಿತು ಇನ್ನೂ ಯಾವುದೆ ದೂರು ದಾಖಲಾಗಿಲಾ ವೆಂದು ತಿಳಿದು ಬಂದಿದೆ