ಘಟಪ್ರಭಾ:ಪೌರಾಣಿಕ ನೀರಿನ ಭಾಂವಿಯ ಜೀರ್ಣೋದ್ಧಾರಕ್ಕೆ ಚಾಲನೆ
ಪೌರಾಣಿಕ ನೀರಿನ ಭಾಂವಿಯ ಜೀರ್ಣೋದ್ಧಾರಕ್ಕೆ ಚಾಲನೆ
ಘಟಪ್ರಭಾ ಸೆ 5 : ಸಮೀಪದ ಶಿಂದಿಕುರಬೇಟ ಗ್ರಾಮದ ದೇಸಾಯರ ವಾಡೆಯ ಆವರಣದಲ್ಲಿ ಆದಿಕೃರ್ತು ಶ್ರೀ ದುರದುಂಡೇಶ್ವರರು ತೋರಿದ ಲೀಲಾ ಪವಾಡದ ಚಿತ್ರಣದ ಫಲಕವನ್ನು ಅರಭಾವಿಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ ಅವರು ಮಂಗಳವಾರದಂದು ಉದ್ಘಾಟಿಸಿ ಪೌರಾಣಿಕ ನೀರಿನ ಭಾಂವಿಯ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಲಾವಿದ ಜಿ.ಎ.ಪತ್ತಾರ, ಗ್ರಾಮದ ಮುಖಂಡರಾದ ಗುರುಸಿದ್ದಪ್ಪ ಕಡೇಲಿ, ಅಮೃತ ಕಾಳ್ಯಾಗೋಳ, ಮಾರುತಿ ಜಾಧವ, ಗೋವಿಂದ ಗಾಡಿವಡ್ಡರ, ಶಿವಪುತ್ರ ಬಾನಿ, ಬಾಬು ಶಿಂಧೆ, ಬಸವಣ್ಣಿ ಸೂರ್ಯವಂಶಿ, ಎಸ್.ಆರ್.ಗಾಯಕವಾಡ, ಪುಂಡಲೀಕ ಬಡಿಗೇರ, ಅರ್ಜುನ ಗಾಯಕವಾಡ, ದಯಾನಂದ ಕಾಳ್ಯಾಗೋಳ, ಅರ್ಚಕರಾದ ಅಜೀತ ಬಡಿಗೇರ, ದುಂಡಯ್ಯ ಹಿರೇಮಠ,ಯುವರಾಜ ಜಗದಾಳೆ, ನಾಮದೇವ ಶಿಂಧೆ ಸೇರಿದಂತೆ ಗ್ರಾಮಸ್ಥರು ಇದ್ದರು.