RNI NO. KARKAN/2006/27779|Friday, November 22, 2024
You are here: Home » breaking news » ಬೆಳಗಾವಿ:ಹೆಬ್ಬಾಳ್ಕರ ನಿಯಂತ್ರಿಸದಿದ್ದರೆ ಉಗ್ರ ನಿರ್ಣಯ: ಸಚಿವ ರಮೇಶ ಎಚ್ಚರಿಕೆ

ಬೆಳಗಾವಿ:ಹೆಬ್ಬಾಳ್ಕರ ನಿಯಂತ್ರಿಸದಿದ್ದರೆ ಉಗ್ರ ನಿರ್ಣಯ: ಸಚಿವ ರಮೇಶ ಎಚ್ಚರಿಕೆ 

ಹೆಬ್ಬಾಳ್ಕರ ನಿಯಂತ್ರಿಸದಿದ್ದರೆ ಉಗ್ರ ನಿರ್ಣಯ: ಸಚಿವ ರಮೇಶ ಎಚ್ಚರಿಕೆ

ಬೆಳಗಾವಿ ಸೆ 6 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಹೈಕಮಾಂಡ್ ಮೂಗುದಾರ ಹಾಕದಿದ್ಧರೆ ಜಾರಕಿಹೊಳಿ ಕುಟುಂಬ ಉಗ್ರ ನಿರ್ಣಯ ಕೈಗೊಳ್ಳಲಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ಮಾತು ಹೇಳಿದ್ದಾರೆ
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದ ಆಶ್ರಯದಿಂದಲೇ ಶಾಸಕಿ ಹೆಬ್ಬಾಳ್ಕರ್​ ರಾಜಕೀಯವಾಗಿ ಬೆಳೆದುಕೊಂಡು ಬಂದಿದ್ದಾರೆ. ನಮ್ಮ ಸಹಕಾರ ಇಲ್ಲದೇ ಇಷ್ಟು ದೊಡ್ಡ ಮಟ್ಟಕ್ಕೆ ಹೆಬ್ಬಾಳ್ಕರ್​  ಬೆಳೆಯುತ್ತಿರಲಿಲ್ಲ. ಇದೀಗ ನಮ್ಮ ವಿರುದ್ಧವೇ ಜಾತಿಯನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದರು.
ಸ್ಥಳೀಯ ಸಮಸ್ಯೆಗಳಿದ್ದರೆ ನನ್ನ ಉಸ್ತುವಾರಿ ಸಚಿವನಾಗಿದ್ದ ನನ್ನ ಜತೆಗೆ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಬೀದಿಗೆ ಬಂದಿದ್ದು ಉಚಿತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ನಾವು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​  ಬಗ್ಗೆ ಮಾತನಾಡುವುದಿಲ್ಲ. ಕಾಂಗ್ರೆಸ್ ನಾಯಕರು ಲಕ್ಷ್ಮಿ ಅವರನ್ನು ನಿಯಂತ್ರಿಸಬೇಕು. ಇಲ್ಲವಾದರೆ ಜಾರಕಿಹೊಳಿ ಕುಟುಂಬ ಉಗ್ರ ನಿರ್ಣಯ ಕೈಗೊಳ್ಳಲಿದೆ ಎಂದು ಹೊಸ ಬಾಂಬ್ ಸಿಡಿಸಿದರು. 

ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಾಳೆ ನಡೆಯಲಿದೆ. ಈ ಚುನಾವಣೆಯಲ್ಲಿ ಸತೀಶ್​ ಜಾರಕಿಹೊಳಿಗೆ ಅವಮಾನ ಆದರೆ ಅದನ್ನು ನಾನು ಸಹಿಸುವುದಿಲ್ಲ. ಸತೀಶ್​ ಜಾರಕಿಹೊಳಿ ಬೆನ್ನಿಗೆ ನಿಂತು ಅವರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧ ಎಂದರು. 

ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ಜಿಲ್ಲಾಧ್ಯಕ್ಷ ಪಟ್ಟ ಕಟ್ಟಿದ್ದೆ ಶಾಸಕ ಸತೀಶ್​ ಜಾರಕಿಹೊಳಿ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ದೊರಕಿಸಿಕೊಡುವಲ್ಲಿ ನಮ್ಮ ಪ್ರಯತ್ನ ಹೆಚ್ಚಿದೆ. ಇದೀಗ ನಮ್ಮ ಕುಟುಂಬ ವಿರುದ್ಧ ತಿರುಗಿ ಬಿದ್ದಿರುವ ಶಾಸಕಿಯ ವರ್ತನೆ ನಮಗೆ ಬೇಸರ ತರಿಸಿದೆ ಎಂದು ಹೇಳಿದರು. 

Related posts: