ಘಟಪ್ರಭಾ:ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಗೋಕುಲಾಷ್ಠಮಿ ಕಾರ್ಯಕ್ರಮ
ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಗೋಕುಲಾಷ್ಠಮಿ ಕಾರ್ಯಕ್ರಮ
ಘಟಪ್ರಭಾ ಸೆ 6 : ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಂಸ್ಕಂತಿಕ,ಧಾರ್ಮಿಕ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು ಎಂದು ಸ್ಥಳೀಯ ಆಡಳಿತ ಮಂಡಳಿ ನಿರ್ದೇಶಕ ರಾಮಪ್ಪ ಜೊತ್ತೇನ್ನವರ ಹೇಳಿದರು.
ಅವರು ಗುರುವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಸಿದ್ರಾಮೇಶ್ವರ ಆದರ್ಶ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀ ಗೋಕುಲಾಷ್ಠಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವಂತೆ ಕರೆ ನೀಡಿದರು.
ಶ್ರೀ ಗೋಕುಲಾಷ್ಠಮಿ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಾಧಾ ಕೃಷ್ಣನ ವೇಷಧಾರೆ ಮಕ್ಕಳಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧಾಯ ಎಂ.ಆರ್.ಕಡಕೋಳ, ಎಸ್.ಎಸ್.ದೊಡಮನಿ, ಜಿ.ಎ.ಕರಾಡೆ, ಎಸ್.ಎಸ್.ಮೋಗಾನಿ, ಎಸ್.ಎಸ್.ಯಮಕನಮರಡಿ, ಪಿ.ಎ.ಸರ್ಕಾವಸ, ಎಂ.ಬಿ.ಪರವ್ವಗೋಳ, ಎಸ್.ಆರ್.ತರಾಳ, ಎಸ್.ಎಂ.ಪಾಟೀಲ, ಎಸ್.ಎಲ್.ಅಂಬಿ, ಎಸ್.ಬಿ.ಕಲಯಗಾರ, ಎಸ್.ಎನ್.ಗಣೇಶನವರ, ಎಲ್.ವೈ.ಮಿಶಾಳೆ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.