ಗೋಕಾಕ:ಶರಣ ಸಾಹಿತ್ಯ ಜಗತ್ತಿಗೆ ಇದುವರೆಗೆ ಮುಟ್ಟದೇ ಇರುವುದು ಅತ್ಯಂತ ವಿಷಾಧಕರ ಸಂಗತಿ
ಶರಣ ಸಾಹಿತ್ಯ ಜಗತ್ತಿಗೆ ಇದುವರೆಗೆ ಮುಟ್ಟದೇ ಇರುವುದು ಅತ್ಯಂತ ವಿಷಾಧಕರ ಸಂಗತಿ
ಗೋಕಾಕ ಸೆ 6 : ಶತಮಾನಗಳು ಗತಿಸಿದರೂ ಶರಣ ಸಾಹಿತ್ಯ ಜಗತ್ತಿಗೆ ಇದುವರೆಗೆ ಮುಟ್ಟದೇ ಇರುವುದು ಅತ್ಯಂತ ವಿಷಾಧಕರ ಸಂಗತಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಚುನಮರಿ ವಿಷಾಧ ವ್ಯಕ್ತಪಡಿಸಿದರು.
ಗುರುವಾರ ಇಲ್ಲಿಯ ಗೋಕಾಕ ಶಿಕ್ಷಣ ಸಂಸ್ಥೆಯ ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೋಕಾಕ ತಾಲ್ಲೂಕು ಘಟಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರಿನ ಜಗದ್ಗುರು ಲಿಂ. ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ “ವಚನ ದಿನ” ಕಾರ್ಯಕ್ರಮದ ಅಂಗವಾಗಿ ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ವಿಳಂಬವಾದರೂ ಕೊನೆಗೆ ಅದನ್ನು ತಲುಪಿಸಲು ಪರಿಷತ್ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಪ್ರೊ. ಗಂಗಾಧರ ಮಳಗಿ ಅವರು “ವಚನ ಸಂಪತ್ತನ್ನು ಉಳಿಸಿಕೊಟ್ಟವರು ಎಂಬ ವಿಷಯ ಕುರಿತು ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷರ ಮುದ್ರಿತ ಭಾಷಣವನ್ನು ವಾಚಿಸಿದರು.
ವಚನ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ವಿಶ್ವಮೌಲ್ಯಗಳು ಕುರಿತು ಡಾ. ಮಹಾದೇವ ಜಿಡ್ಡಿಮನಿ, ವಚನ ವಿಶ್ಲೇಷಣೆಯನ್ನು ಪರಿಷತ್ತಿನ ಕಾರ್ಯದರ್ಶಿ ಸೋಮಶೇಖರ ಮಗದುಮ್, ಸದಸ್ಯೆಯರಾದ ಪ್ರೊ. ಮಹಾನಂದಾ ಪಾಟೀಲ ಮತ್ತು ಶಿವಲೀಲಾ ಪಾಟೀಲ ನಡೆಸಿಕೊಟ್ಟರು.
ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪ್ರೊ. ಚಂದ್ರಶೇಖರ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಿಷತ್ ನಡೆಸಿದ ವಚನಗಾಯನ ಸ್ಪರ್ಧಾ ವಿಜೇತರಾದ ಮೇಘಾ ಗೌಡರ, ಓಂಕಾರ ಬಾಗಪ್ಪಗೋಳ ಮತ್ತು ರೋಹಿಣಿ ಅವರಿಗೆ ಪ್ರಮಾಣ ಪತ್ರ ಮತ್ತು ಪ್ರೋತ್ಸಾಹ ಧನ ವಿತರಿಸಲಾಯಿತು.
ಪರಿಷತ್ ಸದಸ್ಯೆ ಪುಷ್ಪಾ ಮುರಗೋಡ ಸ್ವಾಗತಿಸಿದರು. ಶಿಕ್ಷಕ ಆರ್.ಎಲ್.ಮಿರ್ಜಿ ಕಾರ್ಯಕ್ರಮ ನಿರೂಪಿಸಿದರು. ನವಚೇತನ ಶಾಲೆ ಮುಖ್ಯಾಧ್ಯಾಪಕ ಎಸ್.ಕೆ.ಮಠದ ವಂದಿಸಿದರು.