ಗೋಕಾಕ:ಸಂತೋಷ ಮಡಿವಾಳಪ್ಪ ತಡಸಲ ಅವರಿಗೆ 2018-19 ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ
ಸಂತೋಷ ಮಡಿವಾಳಪ್ಪ ತಡಸಲ ಅವರಿಗೆ 2018-19 ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ
ಗೋಕಾಕ ಸೆ 7 : 2018-19 ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿಯು ತಾಲೂಕಿನ ಹಣಮಾಪೂರ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಪ್ರಧಾನ ಗುರುಗಳಾದ ಸಂತೋಷ ಮಡಿವಾಳಪ್ಪ ತಡಸಲ ಅವರಿಗೆ ದೊರಕಿದೆ.
ಇದೇ ದಿ. 5 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ಟೆಟ್ ಹಾಲ್‍ನಲ್ಲಿ ಜರುಗಿದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಇವರ ಸಾಧನೆಯನ್ನು ಸಚಿವ ರಮೇಶ ಜಾರಕಿಹೊಳಿ, ಮುಖಂಡರಾದ ಲಖನ ಜಾರಕಿಹೊಳಿ, ಅಂಬಿರಾವ ಪಾಟೀಲ, ಜಿಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಡಿಡಿಪಿಐ ಎಮ್.ಡಿ.ದಾಸರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಜಿ.ಬಿ.ಬಳಗಾರ, ಬಿಇಓ ಡಿ.ಎಸ್.ಕುಲಕರ್ಣಿ ಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ ಅವರು ಅಭಿನಂದಿಸಿದ್ದಾರೆ.