RNI NO. KARKAN/2006/27779|Friday, December 13, 2024
You are here: Home » breaking news » ಖಾನಾಪುರ:ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಖಾನಾಪುರ:ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ 

ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

 

ಖಾನಾಪುರ ಜೂ 12: ತಾಲೂಕಿನ ಬೀಡಿ ಗ್ರಾಮದಲ್ಲಿ ಸೋಮವಾರ ದಿನದಂದು ಕೃಷಿಕ ಸಮಾಜ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬೆಳಗಾವಿ-ಹಳಿಯಾಳ ರಾಜ್ಯ ಹೆದ್ದಾರಿ ತಡೆದು 2ಗಂಟೆಗೂ ಹೆಚ್ಚು ಕಾಲ “ರಸ್ತೆ ತಡೆದು ” ಪ್ರತಿಭಟಿಸಲಾಯಿತು. ಪ್ರತಿಭಟನಾ ನಿರತ ರೈತರ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಜಿಲ್ಲಾ ಉಪವಿಭಾಗಾಧಿಕಾರಿ ಡಾ.ಕವಿತಾ ಯೊಗಪ್ಪನವರ ಹಾಗೂ ತಾಲೂಕಾ ತಹಶೀಲ್ದಾರ ಶಿವಾನಂದ ಉಳ್ಳೇಗಡ್ಡಿಯವರ ಮುಖಾಂತರ ಮಾನ್ಯ ಪ್ರಧಾನ ಮಂತ್ರಿ ಮತ್ತು ಮಾನ್ಯ ಮುಖ್ಯಮಂತ್ರಿgಯವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ನಿರತ ರೈತರನ್ನುದ್ದೆಶಿಸಿ ಮಾತನಾಡಿದ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಯಮಕನಮರಡಿ ಮಾತನಾಡಿ ಮದ್ಯಪ್ರದೇಶ ರೈತರ ಮೇಲೆ ಗೋಲಿಬಾರ ಮಾಡಿದ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ನೈತಿಕ ಹೋಣೆ ಹೊತ್ತು ತಕ್ಷಣವೇ ರಾಜಿನಾಮೆ ನೀಡಬೇಕು, ರೈತರ ಪಂಪಸೆಟ್‍ಗಳಿಗೆ ನಿಯಮಿತ ವಿದ್ಯುತ್ ಸರಬರಾಜು, ರೈತರ ಸಾಲಮನ್ನಾ, ಕಬ್ಬಿನ ಬಾಕಿ ಬಿಲ್ಲು ಪಾವತಿ, ರೈತರ ಹೊಲಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸಫಾರ್ಮರ್‍ಗಳನ್ನು ನಿಗದಿತ ಅವಧಿಯ ಒಳಗೆ ದುರಸ್ತಿ ಮಾಡುವುದು, ದಿನಕ್ಕೆ ಕನಿಷ್ಠ 7 ಗಂಟೆ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡುವುದು, ಮಲಪ್ರಭಾ ನದಿಯಿಂದ ತಾಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ ಕೈಗೊಳ್ಳುವುದು, ಕೃಷಿ ಕೂಲಿ ಕಾರ್ಮಿಕರು ಮತ್ತು ಕೃಷಿಕರಿಗೆ ಮಾಶಾಸನ ನೀಡುವುದು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತು ತುಂಬಿದ ರೈತರ ಮುಂಗಾರು ಬೆಳೆಗೆ ಪರಿಹಾರ ವಿತರಿಸುವುದು, ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವುದು ಸೇರಿದಂತೆ ರೈತಾಪಿ ವರ್ಗದ ವಿವಿಧ ಸಮಸ್ಯೆಗಳ ಬಗ್ಗೆ ತಾಲೂಕು ಆಡಳಿತದ ಗಮನ ಸೆಳೆದರು.

ಪ್ರತಿಭಟನಾ ನಿರತರನ್ನು ಉದ್ದಶಿಸಿ ಬೆಳಗಾವಿ ಜಿಲ್ಲಾ ಉಪವಿಭಾಗಾಧಿಕಾರಿ ಡಾ.ಕವಿತಾ ಯೊಗಪ್ಪನವರ ಹಾಗೂ ತಾಲೂಕಾ ತಹಶೀಲ್ದಾರ ಶಿವಾನಂದ ಉಳ್ಳೇಗಡಿ ಮನವಿ ಸ್ವಿಕರಿಸಿ ಮಾತನಾಡಿದ ಅವರು ಈ ಮನವಿಯನ್ನು ಶಿಘ್ರವೇ ಜಿಲ್ಲಾಧಿಕಾರಿಯವರ ಕಛೆರಿಗೆ ರವಾನಿಸಲಾಗುವದು ಹಾಗೂ ಈಗಾಗಲೇ ತಾಲೂಕಿನ ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿ ತಾಲೂಕುಮಟ್ಟದಲ್ಲಿ ಇರುವ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಜರುಗಿಸಲಾಗಿದೆ. ಹೆಸ್ಕಾಂ ಇಲಾಖೆಗೆ ರೈತರ ಟ್ರಾನ್ಸಫಾರ್ಮರ್ ದುರಸ್ತಿಯ ನಿಟ್ಟಿನಲ್ಲಿ ವಿಳಂಬ ಮಾಡದಂತೆ ಸೂಚಿಸಲಾಗಿದೆ. ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ತಾಲೂಕಿನ ಜುಂಜವಾಡ ಗ್ರಾಮದ ರೈತ ಶಿವಾಜಿ ಲಾಡ ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಪರಿಹಾರ ವಿತರಿಸಲಾಗಿದೆ. ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ತಾಲೂಕು ಆಡಳಿತ ಬದ್ಧವಿದ್ದು, ರೈತರಿಗೆ ತೊಂದರೆಯಾಗದಂತೆ ಗಮನಹರಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗುರುಲಿಂಗಯ್ಯಾ ಪೂಜಾರ, ಯಲ್ಲಪ್ಪ ಚೆನ್ನಾಪೂರ, ಗಂಗಪ್ಪ್ ಹಿರೆಕರ, ಶಿವಾಜಿ ಅಂಬಡಗಟ್ಟಿ, ರಾಮಾ ಕಿತ್ತುರ, ಮಹಬೂಬಸುಭಾನಿ ದೇವಲತ್ತಿ ಇನ್ನೂಳಿದ ತಾಲೂಕಿನ ರೈತರು ಹಾಗೂ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.

Related posts: