RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಬೆಟಗೇರಿ ಗ್ರಾಮದಲ್ಲಿ ಸೆ.10 ರಿಂದ 34ನೇ ಸತ್ಸಂಗ ಸಮ್ಮೇಳನ

ಗೋಕಾಕ:ಬೆಟಗೇರಿ ಗ್ರಾಮದಲ್ಲಿ ಸೆ.10 ರಿಂದ 34ನೇ ಸತ್ಸಂಗ ಸಮ್ಮೇಳನ 

ಬೆಟಗೇರಿ ಗ್ರಾಮದಲ್ಲಿ ಸೆ.10 ರಿಂದ 34ನೇ ಸತ್ಸಂಗ ಸಮ್ಮೇಳನ

*5 ದಿನ ಸಂಜೆ 7.30 ಕ್ಕೆ ಸಕಲ ಮಹಾತ್ಮರಿಂದ ಪ್ರವಚನ* ದಾನಿಗಳಿಗೆ ಸತ್ಕಾರ* ಮಹಾಪ್ರಸಾದ

ಬೆಟಗೇರಿ ಸೆ 7 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 34ನೇ ಸತ್ಸಂಗ ಸಮ್ಮೇಳನ ಇದೇ ಸೋಮವಾರ ಸೆ.10 ರಿಂದ 14ರ ತನಕÀ ನಡೆಯಲಿದೆ.
ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಲಿದೆ. ಸೆ.10 ರಂದು ಸಾಯಂಕಾಲ 7.30 ಗಂಟೆಗೆ ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಗುಡಸದ ಈಶ್ವರಾನಂದ ಸ್ವಾಮಿಜಿ, ಹಿಪ್ಪರಗಿಯ ಶಿವರುದ್ರ ಶರಣರು ಇವರಿಂದ ಪ್ರವಚನ ಜರುಗಲಿದೆ.
ಸೆ.11 ರಂದು ಸಾಯಂಕಾಲ 7.30 ಗಂಟೆಗೆ ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿ, ಗುಡಸದ ಈಶ್ವರಾನಂದ ಸ್ವಾಮಿಜಿ, ಕುಂದರಗಿ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮಿಜಿ, ಹಿಪ್ಪರಗಿಯ ಶಿವರುದ್ರ ಶರಣರು ಇವರಿಂದ ಪ್ರವಚನ ಜರುಗಲಿದೆ.
ಸೆ.12 ರಂದು ಸಾಯಂಕಾಲ 7.30 ಗಂಟೆಗೆ ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿ, ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ, ಹಿಪ್ಪರಗಿಯ ಶಿವರುದ್ರ ಶರಣರು ಹಾಗೂ ಉಪಸ್ಥಿತ ಮಹಾತ್ಮರಿಂದ ಪ್ರವಚನ, ಕರಿಕಟ್ಟಿ ಗುರುನಾಥ ಶಾಸ್ತ್ರಿ ಇವರಿಂದ ಕೀರ್ತನೆ ನಡೆಯಲಿದೆ.
ಸೆ.13 ರಂದು ಪ್ರಾತ: ಕಾಲ ಬ್ರಾಹ್ಮೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ, ಸಾಯಂಕಾಲ 6 ಗಂಟೆಗೆ ಇಂಚಲದ ಶಿವಾನಂದಭಾರತಿ ಮಹಾಸ್ವಾಮಿಜಿ ಅವರ ಸ್ವಾಗತ ಮೆರವಣಿಗೆ, ರಾತ್ರಿ 8 ಗಂಟೆಗೆ ಶ್ರೀ ಭಾರತಿ ಮಹಾಸ್ವಾಮಿಜಿ ಘನ ಅಧ್ಯಕ್ಷತೆಯಲ್ಲಿ ಪ್ರವಚನ ನಡೆಯಲಿದೆ. ಹುಣಶ್ಯಾಳ ಪಿ.ಜಿಯ ನಿಜಗುಣ ದೇವರು, ಹಳಕಟ್ಟಿಯ ನಿಜಗುಣ ದೇವರು, ಮಲ್ಲಾಪೂರದ ಚಿದಾನಂದ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಹಡಗಿನಾಳದ ಮಲ್ಲೇಶ ಶರಣರು, ಹಾಗೂ ಉಪಸ್ಥಿತ ಮಹಾತ್ಮರಿಂದ ಪ್ರವಚನ, ಕರಿಕಟ್ಟಿಯ ಗುರುನಾಥ ಶಾಸ್ತ್ರಿ ಇವರಿಂದ ಕೀರ್ತನೆ ಕಾರ್ಯಕ್ರಮ ಜರುಗಲಿದೆ.
ಗ್ರಾಮದ ವೈದ್ಯ ಬಸವಂತ ಈರಪ್ಪ ದೇಯನ್ನವರ ಹಾಗೂ ಬಸಪ್ಪ ಅಡಿವೆಪ್ಪ ದೇಯನ್ನವರ ದಂಪತಿ ಮತ್ತು ಕುಟುಂಬದವರಿಂದ ಡಾ. ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ ನಡೆದ ಬಳಿಕ ಸದ್ಗುರು ಶಿವಾನಂದ ಭಾರತಿ ಶ್ರೀಗಳ ಕಿರೀಟ ಮಹಾಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ ರಾತ್ರಿ ಶಿವ ಭಜನೆ, ಶಿವಜಾಗರಣೆ ಕಾರ್ಯಕ್ರಮ, ಶಿರಗುಪ್ಪಿಯ ಅಪ್ಪು ಬಡಿಗೇರ ತಬಲಾ ಸಾಥ್‍ದೊಂದಿಗೆ ಶೇಗುಣಿಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ ನಡೆಯಲಿದೆ.
ಸೆ.14 ರಂದು ಮುಂಜಾನೆ 10 ಗಂಟೆಗೆ ಸಮ್ಮೇಳನದಲ್ಲಿ ಉಪಸ್ಥಿತರಿರುವ ಸಕಲ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ನಡೆದ ನಂತರ ಶ್ರೀಗಳಿಂದ ಆಶೀರ್ವಚನ, ದಾನಿಗಳಿಗೆ ಸತ್ಕಾರ, ಆಶೀರ್ವಾದ ಮಹಾಮಂಗಲ, ಮಹಾಪ್ರಸಾದ ಕಾರ್ಯಕ್ರಮ ಜರುಗಿ ಸತ್ಸಂಗ ಸಮ್ಮೇಳನ ಸಮಾರೊಪಗೊಳ್ಳಲಿದೆ ಎಂದು ಇಲ್ಲಿಯ ಈಶ್ವರ ಭಜನಾ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Related posts: