ಮೂಡಲಗಿ:ಪೌಷ್ಠಿಕಾಂಶಯುಳ್ಳ ಆಹಾರವು ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿಗೂ ನೆಮ್ಮದಿ ಕೋಡುತ್ತದೆ :ಕೆ.ಆರ್ ಕೊತ್ತಲ
ಪೌಷ್ಠಿಕಾಂಶಯುಳ್ಳ ಆಹಾರವು ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿಗೂ ನೆಮ್ಮದಿ ಕೋಡುತ್ತದೆ :ಕೆ.ಆರ್ ಕೊತ್ತಲ
ಮೂಡಲಗಿ ಸೆ 8 : ಪೌಷ್ಠಿಕಾಂಶಯುಳ್ಳ ಆಹಾರ ಸೇವನೆಯಿಂದಾಗಿ ಸದೃಢ ದೇಹದ ಜೊತೆಗೆ ಸದೃಢವಾದ ಮನಸ್ಸನ್ನು ಪಡೆಯುತ್ತಾರೆ. ನವಧಾನ್ಯಗಳಲ್ಲಿ ರಾಗಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ನಿವೃತ್ತ ಪ್ರಧಾನ ಗುರು ಕೆ.ಆರ್ ಕೊತ್ತಲ ಹೇಳಿದರು.
ಅವರು ಶನಿವಾರ ಸಮೀಪದ ನಾಗನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯಕರ ತೋಟದಲ್ಲಿ ಮೂಡಲಗಿಯ ಶ್ರೀ ಸಾಯಿ ಸೇವಾ ಸಮೀತಿಯಿಂದ ವಿದ್ಯಾಜ್ಯೋತಿಯಾಗಿ ಉಚಿತ ಸಾಯಿ ಪ್ರೋಟಿನ್ ಕ್ಷೀರ್ ಭಾಗ್ಯ ವಿತರಿಸಿ ಮಾತನಾಡಿದರು. ಮಕ್ಕಳು ಅಪೌಷ್ಠಿಕತೆಯಿಂದಾಗಿ ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗಿದೆ. ಹಾಲಿನ ಜೊತೆಯಲ್ಲಿ ದೇಹಕ್ಕೆ ಶಕ್ತಿ ನೀಡುವಂತಹ ಇಂತಹ ಮಿಶ್ರಣಗಳನ್ನು ಮಾಡಿ ಮಕ್ಕಳಿಗೆ ನೀಡುವದರಿಂದ ಬುದ್ದಿ ಶಕ್ತಿ ಹೆಚ್ಚುತ್ತದೆ. ಮಕ್ಕಳು ಪ್ರತಿ ದಿನ ಇಂತಹ ಆಹಾರ ಸೇವನೆಯ ಅಭಿರುಚಿ ಇಟ್ಟುಕೊಳ್ಳಬೇಕು. ಪೌಷ್ಠಿಕಾಂಶಯುಳ್ಳ ಆಹಾರವು ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿಗೂ ನೆಮ್ಮದಿ ಕೋಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾಯಿ ಸಮಿತಿಯ ಭೀಮಸಿ ನಾಯಕ, ಹೊನ್ನಪ್ಪ ನಾಯಕ, ಬಿ.ಆರ್.ಪಿ ಗಳಾದ ಕೆ.ಎಲ್ ಮೀಶಿ, ಬಿ.ಎಮ್ ನಂದಿ, ಸಿ.ಆರ್.ಪಿ ಎಸ್.ಎಮ್ ಗೋಕಾಕ, ಪ್ರಧಾನ ಗುರುಮಾತೆ ಎಸ್.ಎಚ್ ನದಾಫ್, ಜಿ.ಬಿ ನಾಯಕ, ಎಲ್.ಎಸ್ ಕೊಣ್ಣೂರ, ಎಸ್.ಎನ್ ಪತ್ತಾರ, ಎಸ್.ಎಸ್ ಭೂತಾಳೆ, ಆರ್.ಎಸ್ ಕುಲುಗೊಡೆ, ಬಿ.ಎಮ್ ಹುಲಗಬಾಳಿ ಹಾಗೂ ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.