ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ
ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ
ಘಟಪ್ರಭಾ ಸೆ 9 : ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಯುವ ಧುರೀಣ ಸಂತೋಷ ಜಾರಕಿಹೊಳಿ ಹೇಳಿದರು.
ಅವರು ರವಿವಾರದಂದು ಸಮೀಪದ ಧುಪದಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಗ್ರಾಮ ಘಟಕ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಮಾಜ ಸೇವಕ ಹಣಮಂತ ಗಾಡಿವಡ್ಡರ ಅವರ ಜನ್ಮದಿನದ ನಿಮಿತ್ಯ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಸಮುದಾಯ ಸಾಮಾಜಿಕ, ಧಾರ್ಮಿಕ ಹಾಗೂ ಗ್ರಾಮೀಣಾಭಿವೃದ್ದಿ ಪಾಲ್ಗೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಂಘಟನೆಗೆ ಹೆಚ್ಚಿನ ಮಹತ್ವ ಬರುತ್ತದೆ. ಜನ್ಮದಿನ ನಿಮಿತ್ಯ ಹೋಟೆಲ್‍ಗಳಲ್ಲಿ ಪಾರ್ಟಿ ಮಾಡಿ ಮೋಜು ಮಜಾ ಮಾಡಿ ಹಣ ವ್ಯರ್ಥ ಮಾಡುವುದಕಿಂತ ಇಂತಹ ಶಿಬಿರಗಳನ್ನು ಆಯೋಜಿಸಿ ಬಡಜನರ ಆರೋಗ್ಯ ಬಗ್ಗೆ ಕಾಳಜಿ ವಹಿಸಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ. ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಶಿಬಿರದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ| ಆರ್.ಎಸ್.ಬೆಣಚಿನಮರಡಿ, ಕೆಎಚ್‍ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಘನಶ್ಯಾಮ ವೈದ್ಯ, ಮುಖಂಡರಾದ ಹಣಮಂತ ಗಾಡಿವಡ್ಡರ, ಗ್ರಾ. ಪಂ ಅಧ್ಯಕ್ಷ ಎಸ್.ಐ.ಬೆಣವಾಡೆ, ಪ್ರಕಾಶ ಡಾಂಗೆ, ಡಿ.ಎಂ.ದಳವಾಯಿ, ಸುಧೀರ ಜೋಡಟ್ಟಿ, ಮದಾರಸಾಬ ಜಗದಾಳ, ವೈದ್ಯರುಗಳಾದ ಡಾ| ಪ್ರವೀಣ ಕರಗಾಂವಿ, ರಮೇಶ ಹುಲಕುಂದ ಶ್ರೀದೇವಿ ಪೂಜೇರಿ, ಮಮತಾ ಹಡಗಿನಾಳ, ನಂದಿನಿ ಮಿಶಾಳೆ, ಬಿ.ಬಿ.ಈಶ್ವರಪ್ಪಗೋಳ ಕರವೇ ಕಾರ್ಯಕರ್ತರಾದ ರೆಹಮಾನ್ ಮೊಕಾಶಿ, ರವಿ ನಾಂವಿ, ಅಜಿತ್ ಮಲ್ಲಾಪೂರೆ, ರಾಜು ಗಾಡಿವಡ್ಡರ, ವಿಠ್ಠಲ ಗಾಡಿವಡ್ಡರ, ಲಗಮಣ್ಣಾ ಗಾಡಿವಡ್ಡರ, ಲಾಜಿಮ ಮೊಕಾಶಿ ಸೇರಿದಂತೆ ಆಶಾ ಹಾಗೂ ಅಮಗನವಾಡಿ ಕಾರ್ಯಕರ್ತೆಯರು ಇದ್ದರು. ಸುಮಾರು 200ಕ್ಕೂ ಹೆಚ್ಚು ಜನ ಈ ಶಿಬಿರದ ಪ್ರಯೋಜನವನ್ನು ಪಡೆದರು.