RNI NO. KARKAN/2006/27779|Sunday, September 8, 2024
You are here: Home » breaking news » ಘಟಪ್ರಭಾ:ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ

ಘಟಪ್ರಭಾ:ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ 

ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ

ಘಟಪ್ರಭಾ ಸೆ 9 : ತಮಿಳುನಾಡಿನಲ್ಲಿ ಎರಡು ತಿಂಗಳ ಹಿಂದೆ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಕೊಚ್ಚಿ ಕೊಲೆ ಮಾಡಿ ಅವಳ ಶವವನ್ನು ಸುಟ್ಟು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಘಟಪ್ರಭಾ ರೈಲ್ವೆ ಆರ್‍ಪಿಎಫ್ ಸಿಬ್ಬಂಧಿ ಬಂಧಿಸಿ ತಮಿಳುನಾಡು ಪೋಲಿಸರಿಗೆ ಒಪ್ಪಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಕೊಲೆ ಆರೋಪಿ ಶಿವಾ (30) ಎಂದು ತಿಳಿದು ಬಂದಿದ್ದು ಈತ ಬಾಂಬೆಯಿಂದ ಬರುವ ಲೋಕಮಾನ್ಯ ತಿಲಕ ರೈಲ್ವೆಯಲ್ಲಿ ಶುಕ್ರವಾರ ಬೆಳಿಗ್ಗೆ 7ಗಂಟೆಗೆ ಬಂದಿದ್ದು. ರೈಲು ಘಟಪ್ರಭಾ ನಿಲ್ದಾಣದಿಂದ ಬಿಟ್ಟ ನಂತರ ಆತ ರೈಲಿನಿಂದ ಹೊರಗೆ ಜಿಗಿದಿದ್ದಾನೆ ಇದನ್ನು ಗಮನಿಸಿದ ಘಟಪ್ರಭಾದ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿರುವ ಆರ್‍ಪಿಎಫ್ ಸಿಬ್ಬಂಧಿ ಆತನ ವಶಕ್ಕೆ ಪಡೆದು ವಿಚಾರಿಸಿದ್ದಾರೆ ಆದರೆ ಆತನನ್ನು ಒಂದು ದಿನ ಪೂರ್ತಿ ವಿಚಾರಿಸಿದರು ಸರಿಯಾಗಿ ಏನನ್ನು ಹೇಳಲಿಲ್ಲ ನನ್ನ ಹತ್ತಿರ ಹಣವಿಲ್ಲದೆ ತಿರುಗುತ್ತಿದ್ದೇನೆ ಎಂದು ಹೇಳಿದ್ದಾನೆ. ಆಗ ಆರ್‍ಪಿಎಫ್ ಅಧಿಕಾರಿಗಳು ಶುಕ್ರವಾರ ಸಂಜೆ ಚಲಿಸುವ ರೈಲಿನಿಂದ ಜಿಗಿದ ಕಾರಣ ತಿಳಿಯುಲು ನ್ಯಾಯಲಯಕ್ಕೆ ಒಪ್ಪಿಸಲು ನಿರ್ಧರಿಸಿ ಕಳುಹಿಸುವ ಸಂದರ್ಭದಲ್ಲಿ ತಾನೂ ಹಿಂದೆ ಮಾಡಿದ ಅಪರಾಧವನ್ನು ಹೇಳಿದ್ದಾನೆ.
ಆತ ತಮಿಳುನಾಡು ರಾಜ್ಯದ ಕರುಂಗಲ ಗ್ರಾಮದ ಅಟ್ಟ್ಯಾಳ ತಾಲೂಕಿನ ರಾಮನಾಥಪುರಂ ಜಿಲ್ಲೆಯ ಶಿವಾ ವಯಸ್ಸು 30 ಆತನ ತಂದೆ ರವಿ ಎಂದು ತಿಳಿದು ಬಂದಿದ್ದು. ಆತನಿಗೆ ಮದುವೆಯಾಗಿದ್ದು ಎರಡು ಮಕ್ಕಳು ಸಹಾ ಇದ್ದಾರೆಂದು ತಿಳಿದು ಬಂದಿದೆ. ಆದರು ಈತ ಮಾಲದಿ ಎನ್ನುವ 20 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದು ಇವರ ಮಧ್ಯ ವೈಷಮ್ಯ ಬಂದ ಕಾರಣಕ್ಕೆ ಜೂನ್ 29ರಂದು ಪ್ರೀತಿಸಿದ ಹುಡುಗಿಯನ್ನು ಕೊಚ್ಚಿ ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಊರು ಬಿಟ್ಟಿದ್ದಾನೆ. ಆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಈ ಕೊಲೆ ಪ್ರಕರಣದ ಬಗ್ಗೆ ಪತ್ರಿಕೆ ಹಾಗೂ ಟಿವಿ ಮಾಧ್ಯಮದಲ್ಲಿ ಸುದ್ದಿ ಪ್ರಕಟಗೊಂಡಿತ್ತು ಅದರ ನಂತರ ಶಿವಾ ಕೆಲ ದಿನ ಆಂಧ್ರ ಹಾಗೂ ಮಹಾರಾಷ್ಟ್ರದಲ್ಲಿ ವಾಸವಾಗಿದ್ದನು ಯುವತಿ ಕಾಣೆಯಾದ ಬಗ್ಗೆ ಜೂನ್ 29ರಂದು ತಮಿಳುನಾಡಿನಲ್ಲಿ ದೂರು ದಾಖಲಾದರೆ ಈತನ ಮೇಲೆ ಜುಲೈ 13ರಂದು ಕೊಲೆ ಪ್ರಕರಣ ಸಿಆರ್ 93/18 ದಾಖಲಾಗಿದೆ. ಅಂದಿನಿಂದ ಈತನ ಪತ್ತೆಗೆ ಅಲ್ಲಿನ ಪೋಲಿಸರು ಹುಡುಕುತ್ತಿದ್ದರು ಆತ ಪತ್ತೆಯಾಗಿರಲಿಲ್ಲ.
ಘಟಪ್ರಭಾದಲ್ಲಿ ಆರ್‍ಪಿಎಫ್ ಪಿಎಸ್‍ಐ ಎಮ್.ಎಸ್. ವಾಡೇದವರ ಹಾಗೂ ಸಿಬ್ಬಂದಿಯವರಾದ ಆರ್.ಕೆ.ಬಡಿಗೇರ, ಎನ್.ಎಸ್.ಪಾಟೀಲ, ಈತನನ್ನು ಬಂಧಿಸಿ ವಿಚಾರಿಸಿದ ನಂತರ ತಮಿಳುನಾಡು ಪೋಲಿಸರಿಗೆ ತಿಳಿಸಿದ್ದಾರೆ. ತಕ್ಷಣ ಕರುಂಗಲ ಪೋಲಿಸ್ ಠಾಣೆಯ ಪಿಎಸ್‍ಐ ಮಾಧವನ್ ಹಾಗೂ ಸಿಬ್ಬಂದಿಯವರು ಘಟಪ್ರಭಾಕ್ಕೆ ಆಗಮಿಸಿ ಶನಿವಾರ ರಾತ್ರಿ 9ಗಂಟೆಗೆ ಕೊಲೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟಪ್ರಭಾ ರೈಲ್ವೆ ಆರ್‍ಪಿಎಫ್ ಅಧಿಕಾರಿಗಳು ಸೂಕ್ಷಮುವಾಗಿ ತನಿಖೆ ನಡೆಸಿ ಕೊಲೆಗಾರನನ್ನ ಪತ್ತೆ ಮಾಡಿದಕ್ಕಾಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Related posts: