RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ

ಗೋಕಾಕ:ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ 

ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ

ಗೋಕಾಕ ಸೆ 10: ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ವಿಪರೀತವಾಗಿ ಏರಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕ.ರ.ವೇ. ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಸರಕಾರದ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದ ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರಕಾರವು ಕಚ್ಛಾ ತೈಲ ಬೆಲೆ ಏರಿಕೆ ಕಾರಣ ನೀಡಿ ಪರಿಷ್ಕøತ ದರ ನಿಗದಿ ಮಾಡುತ್ತೇವೆ ಎಂದು ಹೇಳಿ ಪೆಟ್ರೋಲ್ ದರವನ್ನು 80 ರಿಂದ 84 ರವರೆಗೆ ಪ್ರತಿಲೀಟರ್‍ಗೆ ಏರಿಸಿ ದೇಶದ ಜನರ ಮೇಲೆ ಹೊರೆ ಹೇರುತ್ತಿದೆ. ಇವರ ಈ ಕ್ರಮದಿಂದ ದೇಶದ ಕೋಟಿಗಟ್ಟಲೆ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೆ ಸ್ವತಂತ್ರ ಭಾರತವನ್ನು ಆಳಿದ ಯಾವುದೇ ಸರಕಾರಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ಈ ತೆರನಾಗಿ ಏರಿಕೆಯಾಗಿ ಸಾರ್ವಜನಿಕರಿಗೆ ಹೊರೆಯಾಗಿಲ್ಲ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾನ್ಯ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕೇಂದ್ರ ಸರಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಬಸವರಾಜ ಖಾನಪ್ಪನವರ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಅಶೋಕ ಬಂಡಿವಡ್ಡರ, ಮುಗುಟ ಫೈಲವಾನ, ಹನೀಫ ಸನದಿ, ಶೆಟ್ಟೆಪ್ಪ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ನಿಯಾಜ ಪಟೇಲ, ಮಲ್ಲಪ್ಪ ತಲೆಪ್ಪಗೋಳ, ಲಕ್ಷ್ಮಣ ಗೊರಗುದ್ಧಿ, ರಾಮಣ್ಣ ಸಣ್ಣಲಗಮನ್ನವರ, ಶ್ರೀಕಾಂತ ಬಾದರವಾಡೆ, ಯಲ್ಲಪ್ಪ ವಣ್ಣೂರ, ಈರಪ್ಪ ಬಬ್ಬರಗಿ, ಬಸು ಗಾಡಿವಡ್ಡರ, ಕಾಮೇಶ ಹಂಚಿನಮನಿ, ರಾಜು ಬಂಡಿವಡ್ಡರ, ರಮೇಶ ಬಂಡಿವಡ್ಡರ, ಸಿದ್ರಾಮ ಬಂಡಿವಡ್ಡರ, ಪರಶುರಾಮ ಬಂಡಿವಡ್ಡರ, ವಿಠ್ಠಲ ಬಂಡಿವಡ್ಡರ, ರಾಮ ಕೊಂಗನೋಳಿ, ದಸ್ತಗೀರ ಮುಲ್ಲಾ, ಫಕೀರಪ್ಪ ಗಣಾಚಾರಿ, ಸಂಜು ಗಾಡಿವಡ್ಡರ, ಅಪ್ಪಯ್ಯ ತಿಗಡಿ, ಹನಮಂತ ಬಡಿಗವಾಡ, ಮಲ್ಲು ಸಂಪಗಾರ, ಕಿರಣ ತೊಗರಿ, ಆನಂದ ಬಿರಡಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: