ಗೋಕಾಕ:ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ
ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ
ಗೋಕಾಕ ಸೆ 10 : ಭಗವಂತ ಭಕ್ತಿಯಿಂದ ಮಾತ್ರ ಗೆಲ್ಲಬಹುದೆಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಅವರು ಹೇಳಿದರು.
ರವಿವಾರದಂದು ಸಂಜೆ ಇಲ್ಲಿಯ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿಯವರು ಹಮ್ಮಿಕೊಂಡ ಶ್ರಾವಣ ಮಾಸದ ಪರಿಯಂತರ ನಡೆದ ಅವಧೂತ ನಾಗಲಿಂಗ ಮಹಾತ್ಮರ ಪ್ರವಚನ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ನಾವೆಲ್ಲ ಅಜ್ಞಾನವೆಂಬ ಭ್ರಮೆಯಿಂದ ಹೊರಬಂದು ದೇವರ ಮನೆಯಲ್ಲಿರುವ ಬಾಡಿಗೆದಾರರೆಂಬ ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು. ಮಹಾತ್ಮರು ಮನುಕುಲ ಉದ್ದಾರಕ್ಕಾಗಿಯೇ ಜಗತ್ತಿಗೆ ಬಂದವರು. ಶ್ರೀ ನಾಗಲಿಂಗ ಶಿವಯೋಗಿಗಳು ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡಲು ಈ ಭೂಮಿಗೆ ಆಗಮಿಸಿದ ಮಹಾತ್ಮರು. ಅವರು ಮಾಡಿದ ಲೀಲೆಗಳು ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳ ಅರಿತು ಬದುಕಿದರೇ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ನಗರ ಸಭಾ ಸದಸ್ಯರು ಹಾಗೂ ಶ್ರೀ ಶಿವಲಿಂಗೇಶ್ವರ ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಬಟಕುರ್ಕಿಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಪ್ರವಚನಕಾರ ಶ್ರೀ ಬಸವರಾಜ ಶರಣರು, ಪ್ರೋ ಚಂದ್ರಶೇಖರ ಅಕ್ಕಿ, ನಗರ ಸಭೆ ಸದಸ್ಯರಾದ ಭಾರತಿ ಹತ್ತಿ, ಶ್ರೀಶೈಲ ಯಕ್ಕುಂಡಿ, ಗಣ್ಯರಾದ ಎಸ್.ಆರ್.ಕಪ್ಪಲಗುದ್ದಿ, ಮಹಾಂತೇಶ ತಾವಂಶಿ, ಶ್ರವಣ ಮನ್ನಿಕೇರಿ, ಎಮ್.ಕೆ.ಮೂಡಲಗಿ, ಜಿ.ಪಿ.ಪಾಟೀಲ, ಆರ್.ವಿ.ಕಡಕೋಳ, ಸಮಿತಿ ಅಧ್ಯಕ್ಷ ಬಿ.ಬಿ.ಕಾಪಶಿ, ಉಪಾಧ್ಯಕ್ಷ ಜೀವಪ್ಪ ಬಡಿಗೇರ, ಕಾರ್ಯದರ್ಶಿ ಲಕ್ಕಪ್ಪ ಕೊತ್ತಲ, ಸದಸ್ಯರಾದ ಅಶೋಕ ಗೋಣಿ, ಉದಯ ಬನ್ನಿಶೆಟ್ಟಿ, ಸಿದ್ದಲಿಂಗಪ್ಪ ದಾಸಪ್ಪನವರ, ಭೀಮಪ್ಪ ಗೋಲಭಾಂವಿ, ಬಾಳೇಶ ಕರಿಗಾರ, ಸುನಂದಾ ಮನ್ನಿಕೇರಿ, ಉಮಾದೇವಿ ಹಿರೇಮಠ ಇದ್ದರು.
ಅಮರಗೊಂಡ ಬಿಜ್ಜಳ ಸ್ವಾಗತಿಸಿದರು. ಕೆ. ಎ. ಕೊಲ್ಲಾಪೂರ ನಿರೂಪಿಸಿದರು. ಕೆ.ವಿ.ಮಾದಗೌಡ ವಂದಿಸಿದರು.