ಗೋಕಾಕ:ಸಂಘಕ್ಕೆ ಹಾಲು ನೀಡುವ ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ
ಸಂಘಕ್ಕೆ ಹಾಲು ನೀಡುವ ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ
*ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಪ್ರಾಣೇಶ ಪಾಟೀಲ ಅಭಿಮತ * ಅತಿ ಹೆಚ್ಚು ಹಾಲು ನೀಡಿದ ಸದಸ್ಯರಿಗೆ ಬಹುಮಾನ ವಿತರಣೆ
ಬೆಟಗೇರಿ ಸೆ 11 : ರೈತರು ನಿತ್ಯದ ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸಂಘದ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಸಂಘದ ಎಲ್ಲ ಸದಸ್ಯರ, ಗ್ರಾಹಕರ ಸಹಕಾರ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಾಣೇಶ ಪಾಟೀಲ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ 2017-18ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಘಕ್ಕೆ ಹಾಲು ನೀಡುವ ಸದಸ್ಯರಿಗೆ, ಸ್ಥಳೀಯರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ವಿ.ಕೆ.ಜೋಶಿ ಮುಖ್ಯಅತಿಥಿಯಾಗಿ ಮಾತನಾಡಿ, ಬೆಳಗಾವಿ ಹಾಲು ಒಕ್ಕೂಟದಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ರೈತರಿಗೆ ದೊರಕುವ ವಿವಿಧ ಸೌಲಭ್ಯಗಳ ಕುರಿತು ಹೇಳಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ವಾರ್ಷಿಕ ವರದಿ ಮಂಡಿಸಿ ಸಂಘವು ಸನ್2017-18ನೇಯ ಸಾಲಿನಲ್ಲಿ 15,71,427 ರೂ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರ ಸದಸ್ಯರಿಗೆ ಶೇ20 ರಷ್ಟು ಡಿವ್ಹಿಡೆಂಡ್, ಸದಸ್ಯರಿಗೆ ಶೇ 65 ರಷ್ಟು ಒಟ್ಟು 7,25,744 ರೂ ಬೋನಸ್ ವಿತರಿಸಲಾಗುವದು ಎಂದರು.
ಸಂಘದ ಶೇರ ಸದಸ್ಯರು, ಗ್ರಾಹಕರು, ಗ್ರಾಮದ ಪ್ರಮುಖ ನಾಗರಿಕರ ಜೋತೆ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು ಸಂಘದ ಸಮಗ್ರ ಪ್ರಗತಿಯ ಕುರಿತು ಹಲವಾರು ವಿಷಯಗಳನ್ನು ಈ ಸಂದಭರ್Àದಲ್ಲಿ ಚರ್ಚಿಸಿದರು.
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಎನ್.ಪಿ.ಹಡಪದ, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಗೋಕಾಕ ಘಟಕದ ವಿಸ್ತರಣಾಧಿಕಾರಿ ಎಸ್.ಬಿ.ಕರಬಣ್ಣವರ, ಬೀರೇಶ ಖಿಲಾರಿ, ಎಸ್.ಎಮ್.ಅತ್ತಾರ, ನಿಂಗಪ್ಪ ಚಂದರಗಿ, ಗೌಡಪ್ಪ ಮೆಳೆಣ್ಣವರ, ನಿಂಗಪ್ಪ ಕೋಣಿ, ಲಕ್ಕಪ್ಪ ಲಕಾಟಿ, ವೀರಭದ್ರ ಪಡಶೆಟ್ಟಿ, ಯಮನಪ್ಪ ತಳವಾರ, ಗುರಪ್ಪ ದೇಯಣ್ಣವರ, ರಾಮಣ್ಣ ಬಳಿಗಾರ, ಕಲ್ಲಪ್ಪ ಚಂದರಗಿ, ಸಂಘದ ಆಡಳಿತ ಮಂಡಳಿ ಸದಸ್ಯರು, ಶೇರ ಸದಸ್ಯರು, ಗ್ರಾಹಕರು, ಮತ್ತಿತರರು ಇದ್ದರು.
ನಾಗಪ್ಪ ಹೂಗಾರ ಸ್ವಾಗತಿಸಿದರು, ಎನ್.ಎ.ನೀಲಣ್ಣವರ ಕಾರ್ಯಕ್ರಮ ನಿರೂಪಿಸಿದರು, ಮಲ್ಲಪ್ಪ ಕಂಬಾರ ಕೊನೆಗೆ ವಂದಿಸಿದರು.
ಬಹುಮಾನ ವಿತರಣೆ :ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಸನ್2017-18ನೇಯ ಸಾಲಿನಲ್ಲಿ ಅತಿ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಿಗೆ ಆಕಳು ಹಾಲು ವಿಭಾಗದಲ್ಲಿ ವಿಜಯ ಮಠದ ಪ್ರಥಮ, ಬಸವ್ವ ಕೋಣಿ ದ್ವೀತಿಯ, ದುಂಡಪ್ಪ ದಂಡಿನ ತೃತೀಯ ಹಾಗೂ ಎಮ್ಮೆ ಹಾಲು ವಿಭಾಗದಲ್ಲಿ ಸತ್ತೆಪ್ಪ ಜಟ್ಟೆಪ್ಪಗೋಳ ಪ್ರಥಮ, ಯಮನಪ್ಪ ತಳವಾರ ದ್ವೀತಿಯ, ಬಾಳಪ್ಪ ಕೆಂಪನಿಂಗಪ್ಪಗೋಳ ತೃತೀಯ ಸ್ಥಾನಗಳಿಗೆ ಸಂಘದ ಅಧ್ಯಕ್ಷ ಪ್ರಾಣೇಶ ಪಾಟೀಲ ತ್ರಾಮದ ಹಾಂಡೆ ಸೇರಿದಂತೆ ಗೃಹೋಪಯೋಗಿ ಉಪಕರಣ, ಎರಡು ಸಾವಿರಕ್ಕಿಂತ ಹೆಚ್ಚು ಬೋನಸ್ ಪಡೆದ ಸಂಘಕ್ಕೆ ಹಾಲು ನೀಡುವ 107 ಸದಸ್ಯರಿಗೆ ಸ್ಟಿಲ್ ಬಕೆಟ್‍ಗಳನ್ನು ಬಹುಮಾನ ರೂಪದಲ್ಲಿ ನೀಡಿ ಸನ್ಮಾನಿಸಿದರು.