ಘಟಪ್ರಭಾ:ಕಲ್ಲಪ್ಪ ಮ.ಅರಭಾಂವಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಕಲ್ಲಪ್ಪ ಮ.ಅರಭಾಂವಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಘಟಪ್ರಭಾ ಸೆ 12 : ಸ್ಥಳೀಯ ನಿವಾಸಿ ಹಾಗೂ ಹುಣಶ್ಯಾಳ ಪಿ.ಜಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಕಲ್ಲಪ್ಪ ಮ.ಅರಭಾಂವಿ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೊಡಿ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರು ಕೊಡಮಾಡುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಹುಣಶ್ಯಾಳ ಪಿ.ಜಿ ಸರ್ಕಾರಿ ಪ್ರೌಢ ಶಾಲೆಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದನ್ನು ಗಮನಿಸಿ ಶಿಕ್ಷಕ ಅರಭಾಂವಿ ಅವರಿಗೆ ಇತ್ತೀಚಿಗೆ ಚಿಕ್ಕೋಡಿಯಲ್ಲಿ ಜರುಗಿದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಮೋಘ ಶಿಕ್ಷಕ ರಾಜ್ಯ ಪ್ರಶಸ್ತಿ, ಜಿಲ್ಲಾ ತೇಜ ರತ್ನ ಪ್ರಶಸ್ತಿ, ಡಾ.ಎಸ್.ರಾಧಾ ಕೃಷ್ಣನನ್ ಪ್ರಶಸ್ತಿ ಹಾಗೂ ಗುರು ತಿಲಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಶಿಕ್ಷಕ ಅರಭಾಂವಿ ಅವರು ಭಾಜನರಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಗಣೇಶ ಹುಕ್ಕೇರಿ, ಡಿ.ಡಿ.ಪಿ.ಐ ಎಂ.ಜಿ.ದಾಸರ, ಜಿಲ್ಲಾ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಚಿಕ್ಕೋಡಿ ಬಿ.ಇ.ಓ ಶ್ರೀಪತಿ ಭಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಶಿಕ್ಷಣಾಧಿಕಾರಿಗಳು, ಶ್ರೀಗಳು ಹಾಗೂ ಗಣ್ಯರು ಇದ್ದರು.