ಗೋಕಾಕ:ಭಾರತೀಯ ಸಂಸ್ಕಂತಿಯ ಪ್ರತೀಕ ಸ್ವಾಮಿ ವಿವೇಕಾನಂದರು: ಡಿ.ಎಸ್.ಹುಗ್ಗಿ
ಭಾರತೀಯ ಸಂಸ್ಕಂತಿಯ ಪ್ರತೀಕ ಸ್ವಾಮಿ ವಿವೇಕಾನಂದರು: ಡಿ.ಎಸ್.ಹುಗ್ಗಿ
ಷಿಕಾಗೊ ಸಮ್ಮೇಳನ: 125ನೇ ವರ್ಷಾಚರಣೆ ಕಾರ್ಯಕ್ರಮ
ಕಲ್ಲೋಳಿ ಸೆ 12 : ವಿವೇಕಾನಂದ ಅಪ್ಪಟ ದೇಶಾಭಿಮಾನಿ. ಭಾರತೀಯ ಸಂಸ್ಕøತಿಯ ಹರಿಕಾರ. ದೇಶದ ಭವ್ಯ ಸಂಸ್ಕøತಿಯನ್ನು ಜಗತ್ತಿಗೆ ಪರಿಚಯಿಸಿದ ವiಹಾನ್ ಮೇಧಾವಿ ಎಂದು ಸಮಾಜಶಾಸ್ತ್ರ ಅಧ್ಯಾಪಕ ಡಿ.ಎಸ್.ಹುಗ್ಗಿ ಅವರು ಹೇಳಿದರು.
ಕಲ್ಲೋಳಿಯ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಗಾಂಧೀ ಸ್ಮಾರಕ ನಿಧಿ ಹಾಗೂ ರೆಡ್ ಕ್ರಾಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಳಲಾದ ಸ್ವಾಮಿ ವಿವೇಕಾನಂದರ ಷಿಕಾಗೊ ಉಪನ್ಯಾಸಕ್ಕೆ 125 ವರ್ಷ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ ಮಾತನಾಡಿ, ದೇಶದ ಮೇಲೆ ಅನೇಕ ವಿದೇಶಿಯರು ದಾಳಿ ಮಾಡಿದ್ದಾರೆ, ಆಳ್ವಿಕೆ ಮಾಡಿದ್ದಾರೆ ಆದರೂ ಭಾರತೀಯರು ಭಾರತೀಯರಾಗಿ ಉಳಿದಿದ್ದಾರೆ. ಜಗತ್ತಿಗೆ ಶಾಂತಿ ಸಂದೇಶ ಸಾರಿದ ದೇಶದ ಭಾರತ. ಅನೇಕ ಯುಗಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ. ವಿವೇಕಾನಂದರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉದಾತ್ತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಾದ ಕು. ಸುಶ್ಮೀತಾ ನಾಯಕವಾಡಿ, ಸಿದ್ರಾಯ ಜಲ್ಲಾಲೇರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ.ಬಿ.ಕೂಲಮೂರ ಮಾತನಾಡಿ ವಿವೇಕಾನಂದರು ಆಧ್ಯಾತ್ಮಿಕ ಕ್ರಾಂತಿ ಮಾಡಿ ಇಡೀ ವಿಶ್ವವೇ ಭಾರತದತ್ತ ನೋಡುವ ಹಾಗೆ ಮಾಡಿದ್ದಾರೆ. ಭಾರತವನ್ನು ಅರ್ಥೈಸಿಕೊಳ್ಳಬೇಕೆಂದರೆ ವಿವೇಕಾನಂದರ ಕೃತಿಗಳನ್ನು ಓದಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಬಿ.ಬಿ.ವಾಲಿ, ಅಧ್ಯಾಪಕೀಯರಾದ ವಿ.ವಾಯ್.ಕಾಳೆ, ಪ್ರತೀಭಾ ಮಾಸ್ತಿಹೊಳಿ, ಎಂ.ಆರ್.ಕರಗಣಿ ಮುಂತಾದವರು ಪಾಲ್ಗೊಂಡಿದ್ದರು.
ಕು. ಬಾಳವ್ವ ಹುಲಕುಂದ ನಿರೂಪಿಸಿದರು, ಶಾರದಾ ನೇಸರಗಿ ಪ್ರಾರ್ಥಿಸಿದರು, ವಿದ್ಯಾರ್ಥಿ ಪ್ರದಾನಕಾರ್ಯದರ್ಶಿ ಸುರೇಖಾ ಗಿಡ್ಡವ್ವಗೋಳ ಸ್ವಾಗತಿಸಿದರು, ವಾಣಿಶ್ರೀ ಪವಾರ ವಂದಿಸಿದರು.