ಗೋಕಾಕ:ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು
ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು
ಗೋಕಾಕ ಜೂ 15: ಸಮಾಜದಲ್ಲಿ ಭಾವೈಕ್ಯೆತೆ ಸಾರುವ ಕಾರ್ಯಗಳು ನಡೆಯಬೇಕಾಗಿದೆ ಎಂದು ನಗರದ ಮ.ನಿ ಪ್ರ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು
ಅವರು ಬುಧವಾರ ಸಾಯಂಕಾಲ ನಗರದ ಹೋಟೆಲ್ ನಿಯಾಜ ಆವರಣದಲ್ಲಿ ಮುಸ್ಲಿಂ ಸಮುದಾಯ ಭಾಂಧವರು ಹಮ್ಮಿಕೊಂಡಿದ್ದ ಇಫ್ತಯಾರ್ ಕೂಟದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು
ಪವಿತ್ರ ರಮಜಾನ ಮಾಸದಲ್ಲಿ ಮುಸ್ಲಿಂ ಭಾಂಧವರು ಧಾನ , ಧರ್ಮಗಳಲ್ಲಿ ಪಾಲ್ಗೊಂಡು ಅಲ್ಹಾನ ಕರುಣೆಗೆ ಪಾತ್ರರಾಗಬೇಕು . ಶಾಂತಿ ಸಹಬಾಳ್ವೆಯ ಸಂದೆಶ ಸಾರಿದ ಪ್ರವಾಧಿ ಮಹ್ಮಮದರು ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿ ಮಾದರಿಯಾಗಿದ್ದಾರೆ ಅವರ ತತ್ವಾರ್ದಶಗಳನ್ನು ಪಾಲಿಸಿ ಅವರು ನಡೆದ ದಾರಿಯಲ್ಲಿ ಇಂದು ನಾವು ಮುನ್ನಡೆಯಬೇಕಾಗಿದೆ ಎಂದು ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಮೌಲಾನಾ ಬಶೀರಅಹ್ಮದ್ ಅಮಲಜರಿ , ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ನಗರಸಭೆ ಸದಸ್ಯ ಬಿಬು ಶೇಖಬಡೆ, ಮಾಜಿ ನಗರಸಭೆ ಸದಸ್ಯ ಅಬ್ದುಲರಹೇಮಾನ ದೇಸಾಯಿ, ಮಲ್ಲಿಕ ಪೈಲವಾನ, ರಿಯಾಜ ಚೌಗಲಾ, ಸಿ.ಬಿ.ಗಿಡ್ಡನವರ ,ಸಂತೋಷ ಪೂಜಾರಿ , ಮುನ್ನಾ ಸೌದಾಗರ , ಅಡಿವೇಶ , ತನ್ವೀರ್ ಸಂಶೇರ ,ಮನ್ನಜೂರ ಸಂಶೇರ , ಅಯೂಬ ಪೀರಜಾದೆ ಸೇರಿದಂತೆ ಇತತರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಹೋಟೆಲ್ ನಿಯಾಜ ಮಾಲಿಕರಾದ ಇರ್ಶಾದ ಸೌದಾಗರ ಶ್ರೀಗಳಿಗೆ ಸತ್ಕರಿಸಿ ಗೌರವಿಸಿದರು