RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ : ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ

ಗೋಕಾಕ:ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ : ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ 

ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ : ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ

ಬೆಟಗೇರಿ ಸೆ 14 : ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ. ಸದ್ಗುರು ಸಿದ್ದಾರೂಢರು ಮಹಾ ಕರುಣಾಮಯಿ ಆಗಿದ್ದರು ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಶುಕ್ರವಾರ ಸೆ.14 ರಂದು ನಡೆದ 34ನೇ ಸತ್ಸಂಗ ಸಮ್ಮೇಳನ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಗವಂತನ ರೂಪದಲ್ಲಿ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರು ಧರೆಯ ಮೇಲೆ ಅವತರಿಸಿ ಈ ಲೋಕದ ಜನರಲ್ಲಿ ಸುಜ್ಞಾನದ ಬೆಳಕು ನೀಡಿ, ಸಕಲರಿಗೆ ಒಳ್ಳೆಯದನ್ನೇ ಬಯಸಿ, ನಮ್ಮೆಲ್ಲರನ್ನೂ ಉದ್ದರಿಸಿದ ಮಹಾನ ಸದ್ಗುರುವಾಗಿದ್ದರು ಎಂದರು.
ಹುಣಶ್ಯಾಳದ ನಿಜಗುಣ ದೇವರು, ಹಳಕಟ್ಟಿಯ ನಿಜಗುಣ ದೇವರು, ಮಲ್ಲಾಪೂರದ ಚಿದಾನಂದ ಮಹಾಸ್ವಾಮಿಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮತಾಯಿ ಅಸುಂಡಿ, ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಹಿಪ್ಪರಗಿಯ ಶಿವರುದ್ರ ಶರಣರು, ಹಡಗಿನಾಳದ ಮಲ್ಲೇಶ ಶರಣರು, ಶಿವಶರಣೆ ಮೈತ್ರಾದೇವಿ ಅವರಿಂದ ಕರುಣೆಯ ಸಾಗರ ಸದ್ಗುರು ಸಿದ್ಧಾರೂಢರು ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
ಶಿರಗುಪ್ಪಿಯ ಅಪ್ಪು ಬಡಿಗೇರ ಅವರ ತಬಲಾ ಸಾಥ್‍ದೊಂದಿಗೆ ಶೇಗುಣ್ಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ ಜರುಗಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ಶಾಲಾ ಮಕ್ಕಳು, ಗಣ್ಯರು, ದಾನಿಗಳಿಗೆ ಶ್ರೀಗಳಿಂದ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸತ್ಕರಿಸಿಲಾಯಿತು, ಸಕಲ ಶ್ರೀಗಳಿಂದ ಪ್ರವಚನ, ಆಶೀರ್ವಚನ, ಮಹಾಮಂಗಲ, ಮಹಾಪ್ರಸಾದದೊಂದಿಗೆ ಸತ್ಸಂಗ ಸಮ್ಮೇಳನ ಸಮಾರೊಪಗೊಂಡಿತು.
ಸ್ಥಳೀಯ ಶರಣರಾದ ಪುಂಡಲೀಕಪ್ಪ ಪಾರ್ವತೇರ, ಬಸಪ್ಪ ದೇಯಣ್ಣವರ, ಬಸವರಾಜ ಪಣದಿ, ಈಶ್ವರ ಬಳಿಗಾರ, ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ನಿಂಗಪ್ಪ ಕಂಬಿ, ಶ್ರೀಧರ ದೇಯನ್ನವರ, ರಾಮಣ್ಣ ಮುಧೋಳ, ಬಸನಗೌಡ ದೇಯನ್ನವರ, ಗೌಡಪ್ಪ ಮೆಳೆನ್ನವರ, ಬಸವರಾಜ ನೀಲನ್ನವರ, ಸಂತ ಶರಣರು, ಸ್ಥಳೀಯ ಈಶ್ವರ ಭಜನಾ ಮಂಡಳಿ ಸದಸ್ಯರು, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಗ್ರಾಮಸ್ಥರು, ಸಾವಿರಾರು ಜನ ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು ಉಪಸ್ಥಿತರಿದ್ದರು.
 ಕಾರ್ಯಕ್ರಮ: ಗ್ರಾಮದಲ್ಲಿ ಇದೇ ಸೋಮವಾರ ಸೆ.10 ರಿಂದ ಐದು ದಿನಗಳ ಕಾಲ ಆರಂಭವಾದ 34ನೇ ಸತ್ಸಂಗ ಸಮ್ಮೇಳನದ ಐದು ದಿನವೂ ಸಹ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಕಾರ್ಯಕ್ರಮ ಜರುಗಿತು. ಸೆ.13 ರಂದು ಪ್ರಾತ: ಕಾಲ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ ಜರುಗಿ, ಇಂಚಲ ಸಾಧು ಸಂಸ್ಥಾನ ಮಠದ ಶಿವಾನಂದಭಾರತಿ ಮಹಾಸ್ವಾಮಿಜಿ ಅವರ ಸ್ವಾಗತ ಮೆರವಣಿಗೆ ನಡೆದ ಬಳಿಕ ಸ್ಥಳೀಯ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ ಸಡಗರದಿಂದ ಜರುಗಿದ ನಂತರ ಸದ್ಗುರು ಶಿವಾನಂದ ಶ್ರೀಗಳ ಕೀರಿಟ ಮಹಾ ಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ, ಕುಳಲಿ ಮತ್ತು ಹೊಸೂರು ಗ್ರಾಮದ ಭಜನಾ ತಂಡವರಿಂದ ಶಿವ ಭಜನೆ, ಶಿವ ಜಾಗರಣೆ ಕಾರ್ಯಕ್ರಮ ನಡೆಯಿತು.

Related posts: