RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಸರ್ಕಾರ ಅಸ್ಥಿರ ಗೊಳಿಸುವ ಶಾಸಕರ ಅನರ್ಹತೆಗಾಗಿ ಉಚ್ಛ ನ್ಯಾಯಾಲಯದಲ್ಲಿ ಪಿಐಎಲ್-ಗಡಾದ

ಮೂಡಲಗಿ:ಸರ್ಕಾರ ಅಸ್ಥಿರ ಗೊಳಿಸುವ ಶಾಸಕರ ಅನರ್ಹತೆಗಾಗಿ ಉಚ್ಛ ನ್ಯಾಯಾಲಯದಲ್ಲಿ ಪಿಐಎಲ್-ಗಡಾದ 

ಸರ್ಕಾರ ಅಸ್ಥಿರ ಗೊಳಿಸುವ ಶಾಸಕರ ಅನರ್ಹತೆಗಾಗಿ ಉಚ್ಛ ನ್ಯಾಯಾಲಯದಲ್ಲಿ ಪಿಐಎಲ್-ಗಡಾದ

ಮೂಡಲಗಿ ಸೆ 14 : ಪ್ರಜಾ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಹಾಗೂ ಸರ್ಕಾರ ಅಸ್ಥಿರ ಗೊಳಿಸುವ ಶಾಸಕರ ಅನರ್ಹತೆಗಾಗಿ ಉಚ್ಛ ನ್ಯಾಯಾಲಯದಲ್ಲಿ ಶೀಘ್ರವೇ ಸಾರ್ವಜನಿಕ ಹಿತ್ತಾಶಕ್ತಿ ಅರ್ಜಿಸಲ್ಲಿಸಲಾಗುವದು ಎಂದು ಉತ್ತರ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.
ಅವರು ಶುಕ್ರವಾರ ಮೂಡಲಗಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಬರುವ ದಿನಗಳ್ಲಲಿ ಬಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದೇ? ಎಂಬ ಪ್ರಶ್ನೆಯು ದೇಶದ ಪ್ರತಿಯೊಬ್ಬ ಪ್ರಜೆಯನ್ನು ಕಾಡುತ್ತಿದೆ. ಒಂದು ಪಕ್ಷದಿಂದ, ಆ ಪಕ್ಷದ ಚಿನ್ಹೆ ಮೇಲೆ ಮತಗಳನ್ನು ಪಡೆದು ವಿಧಾನಸಭೆ ಹಾಗೂ ಲೋಕಸಭೆಗಳಿಗೆ ಆರಿಸಿ ಹೋಗುವ ನಮ್ಮ ಶಾಸಕರು, ಸಂಸದರುಗಳು ಅಧಿಕಾರದ ಆಸೆಗಾಗಿ ಚುನಾಯಿತರಾಗಿ ಹೋದ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಪಕ್ಷಾಂತರ ಮಾಡುವದು ಎಷ್ಟು ಸಮಂಜಸ? ಎನ್ನುವುದನ್ನು ತಿಳಿದುಕೊಳ್ಳುವುದು ಅವಶ್ಯವಿದೆ.

ಇತ್ತೀಚಿಗೆ ಎಲ್ಲಾ ರಾಜಕೀಯ ಪಕ್ಷಗಳು ತತ್ವ ಸಿದ್ಧಾಂತವನ್ನು ಹಾಗೂ ರಾಜಕಿಯ ಮೌಲ್ಯಗಳನ್ನು ಕಳೆದುಕೊಳ್ಳುತ್ತವೆ ಎಂದರೆ ತಪ್ಪಾಗಲಾರದು. ಇದಕ್ಕೆ ರಾಜ್ಯದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿಯಾಗಿವೆ. ಕಾಂಗ್ರೆಸ್ಸ ಪಕ್ಷದಿಂದ ಚುನಾಯಿತರಾಗಿರುವ ಜಾರಕೊಹೋಳಿ ಸಹೋದರರು ಕಾಂಗ್ರೆಸ್ಸ ಪಕ್ಷದಲ್ಲಿ ತಮ್ಮದೇನು ನಡೆಯುವುದಿಲ್ಲಾ, ನಮ್ಮ ಪಕ್ಷದಿಂದಲೇ ನಮಗೆ ಅನ್ಯಾಯವಾಗಿದೆ ಎಂಬ ಹೇಳಿಕೆಗಳನ್ನು ನೀಡುತ್ತಾ ಕೆಲವು ಜನ ಶಾಸಕರೊಂದಿಗೆ ಬಿ.ಜೆ.ಪಿ ಸೇರುವುದಾಗಿ ಹೇಳುತ್ತಿರುವ ಜಾರಕಿಹೋಳಿ ಸಹೋದರರು ಪ್ರತಿಯೊಂದು ರಾಜಕೀಯ ಪಕ್ಷದಲ್ಲಿ ಒಬ್ಬೊಬ್ಬರು ಗುರುತಿಸಿಕೊಂಡು ಪ್ರತಿ ಹೊಸ ಸರ್ಕಾರಗಳಲ್ಲಿ ಒಬ್ಬರು ಸಚಿವ ಸ್ಥಾನವನ್ನು ಪಡೆಯುತ್ತಲೇ ಬಂದಿರುತ್ತಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ ತಮ್ಮ ಕುಟುಂಬದವರು ಸಚಿವರು ಇರಲೇ ಬೇಕು ಎಂಬುದು ಜಾರಕಿಹೋಳಿ ಸಹೋದರರ ರಾಜಕೀಯ ತಂತ್ರಗಾರಿಕೆಯಾಗಿದೆ. ಇವರ ಇನ್ನೊಬ್ಬ ಸಹೋದರ ಬಾಲಚಂದ್ರ ಜಾರಕಿಹೋಳಿ ಇವರು ಬಿ.ಜೆ.ಪಿ ಪಕ್ಷದ ಶಾಸಕರಾಗಿದ್ದಾರೆ ಇವರು ಈ ಮೊದಲು ಜೆ.ಡಿ.ಎಸ್ ಪಕ್ಷದಲ್ಲಿದ್ದರು ಅಲ್ಲದೇ ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರು ಕೂಡಾ ಆಗಿದ್ದರು. ಅಲ್ಲದೇ ಇವರು ಕೂಡಾ ಪೌರಾಡಳಿತ ಸಚಿವರಿದ್ದಾಗಲೇ ಅಂದಿನ ಸರ್ಕಾರವನ್ನು ಅಸ್ಥಿರಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಈ ಸಮಯದಲ್ಲಿ ಅವರು ಶಾಸಕ ಸ್ಥಾನದಿಂದ ಅನರ್ಹ ಕೂಡಾ ಆಗಿದ್ದರು.
ಕಳೆದ ವರ್ಷ ಜಾರಕಿಹೋಳಿ ಕುಟುಂಬದ ಮೆಲೆ ಆದಾಯ ತೆರಿಗೆ ಇಲಾಖೆÉ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿರುವುದನ್ನು ರಾಜ್ಯದ ಜನರು ಇನ್ನೂ ಮರೆತಿಲ್ಲಾ ಅಲ್ಲದೇ ಮಾನ್ಯ ಪ್ರಧಾನಿ ನರೇಂದ್ರ ಮೋದೀಜಿ ರವರು ಉತ್ತರ ಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಅಂದಿನ ಕಾಂಗ್ರೆಸ್ಸ್ ಸರ್ಕಾರದಲ್ಲಿ ಸಚಿವರಾಗಿದ್ದ ಇದೇ ಜಾರಕಿಹೋಳಿ ಸಹೋದರ ಉದಾಹರಣೆ ನೀಡಿ ಜಾರಕಿಹೋಳಿಯವರಂಥ ಭ್ರಷ್ಠ ಸಚಿವರು ಕಾಂಗ್ರಸ್ ಸರ್ಕಾರದಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷವು ಭ್ರಷ್ಠರಿಗೆ ರಕ್ಷಣೆ ನೀಡುತ್ತದೆ ಎಂದು ಪ್ರಚಾರ ಮಾಡಿದ್ದರು ಅಲ್ಲದೇ ಕರ್ನಾಟಕದ ಪ್ರತಿಯೊಂದು ಜಿಲ್ಲಾ ಕೆಂದ್ರಗಳಲ್ಲಿ ಬಿ.ಜೆ.ಪಿಯ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಜಾರಕಿಹೋಳಿಯವರನ್ನು ಸಚಿವ ಸ್ಥಾನದಿಂದ ಕೈ ಬಿಡುವಂತೆ ಅಂದಿನ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಆದರೆ ಅದೇ ಬಿ.ಜೆ.ಪಿ ಪಕ್ಷದವರು ಇಂದು ಜಾರಕಿಹೋಳಿ ಸಹೋದರರಿಗೆ ತಮ್ಮ ಪಕ್ಷಕ್ಕೆ ಬರಲು ಆವ್ಹಾನ ನೀಡುತ್ತಿರುವುದನ್ನು ಗಮನಿಸಿದಾಗ ಅಧಿಕಾರದ ಆಸೆಗಾಗಿ ಬಿ.ಜೆ.ಪಿ ಪಕ್ಷವು ಇಂತಹ ಭ್ರಷ್ಠರನ್ನು ತಮ್ಮ ಪಕ್ಷ್ಕಕೆ ಸೆಳೆದುಕೊಳ್ಳುವ ಮೂಲಕ ರಾಜಕೀಯ ಮೌಲ್ಯ ಹಾಗೂ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರುತ್ತಿದೆ ಅಂದರೆ ತಪ್ಪಾಗಲಾರದು. ಅಧಿಕಾರದ ಆಸೆಗಾಗಿ ಮತ್ತು ತಮ್ಮ ಬೇಡಿಕೆಗಳ ಇಡೇರಿಕೆಯ ಸಲುವಾಗಿ ತಂತ್ರಗಾರಿಕೆಯಿಂದ ಇಡೀ ಸರಕಾರವನ್ನೇ ಉರುಳಿಸಲು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಲು ಮುಂದಾದವರ ಬಗ್ಗೆ ಹಾಗೂ ಇಂಥಹ ಬೆಳವಣಿಗೆಗಳಿಗೆ ಪ್ರಚೋದನೆ ನೀಡುವ ರಾಜಕೀಯ ಪಕ್ಷಗಳಿಗೆ ಜನರು ಚುನಾವಣೆಗಳಲ್ಲಿ ಉತ್ತರ ನೀಡಬೇಕು.
ಕಾರಣ ಈ ರೀತಿ ಅರಾಜಕತೆ ಹೇಳಿಕೆಗಳನ್ನು ರಾಜ್ಯದ ಜನರಲ್ಲಿ ಬಿತ್ತುವುದರ ಮೂಲಕ ಸಾಮಾಜಿಕ ಅಸಮತೋಲನ ಹಾಗೂ ರಾಜ್ಯ ಸರ್ಕಾರದ ಅಸ್ಥಿರತೆಗೆ ಕಾರಣರಾಗುವ ಶಾಸಕರ ಮೇಲೆ ಆಯಾ ಪಕ್ಷಗಳ ಶಾಸಕಾಂಗ ಪಕ್ಷದ ಮುಖ್ಯಸ್ಥರು ಕ್ರಮ ಕೈಗೊಳ್ಳುವಂತೆ ಹಾಗೂ ಈಗಿರುವ ಪ್ರಜಾ ಪ್ರತಿನಿಧಿ ಕಾಯ್ದೆಯಲ್ಲಿ ತಿದ್ದುಪಡಿ ತರುವುದರ ಮೂಲಕ ಯಾವುದೇ ಒಂದು ಪಕ್ಷದ ಚಿನ್ಹೆಯಿಂದ ಚುನಾಯಿತರಾದವರು ಸರ್ಕಾರದ ಅವಧಿ ಮುಗಿಯುವವರೆಗೆ ಅದೇ ಪಕ್ಷದಲ್ಲಿ ಇರಬೇಕು. ಇಲ್ಲದೇ ಹೋದರೆ ಅವರು ಶಾಸಕ ಸ್ಥಾನದಿಂದ ಅನರ್ಹರಾಗುವಂತೆ ಮಾಡಲು ಕಾನೂನು ರೂಪಿಸಲು ಸರ್ಕಾರಕ್ಕೆ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗುವದು ಎಂದರು.
ಚನ್ನಪ್ಪ ಅಥಣಿ, ಮಲ್ಲಪ್ಪ ತೇರದಾಳ, ಜಗದೀಶ ಗಾಣಿಗೇರ ಉಪಸ್ಥಿತರಿದ್ದರು.

Related posts: