ಬೆಳಗಾವಿ:ಸಾಲ ಮನ್ನಾ ವಿಚಾರ ರೈತರಿಗೆ ಸಿಹಿ ಸುದ್ದಿ ಕೋಟ್ಟ ದೊರೆ ಕುಮಾರಸ್ವಾಮಿ
ಸಾಲ ಮನ್ನಾ ವಿಚಾರ ರೈತರಿಗೆ ಸಿಹಿ ಸುದ್ದಿ ಕೋಟ್ಟ ದೊರೆ ಕುಮಾರಸ್ವಾಮಿ
ಬೆಳಗಾವಿ ಸೆ 15 : ರಾಷ್ಟ್ರೀಕೃತ ಬ್ಯಾಂಕನಲ್ಲಿರುವ ರಾಜ್ಯದ ರೈತರ ಸಾಲವನ್ನು
ಜುಲೈ ತಿಂಗಳಲ್ಲಿ ಏಕಕಾಲಕ್ಕೆ ಮನ್ನಾ ಮಾಡಲಾಗುವದು ಎಂದು ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದರು
ನಗರದಲ್ಲಿ ಇಂದು ಕನ್ನಡ ಭವನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬ್ಯಾಂಕ್ನಲ್ಲಿ ರಾಜ್ಯದ ರೈತರು 30 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ಈ ಸಾಲ ಮನ್ನಾಗೆ ನಾಲ್ಕು ಕಂತು ಪಡೆಯಲ್ಲ. ಬರುವ ಜುಲೈಗೆ ಏಕಕಾಲದಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದ ಅವರು, ರೈತರು ಗೊಂದಲಕ್ಕೀಡಾಗಬಾರದು ಎಂದು ಮನವಿ ಮಾಡಿಕೊಂಡರು.
ಅಲ್ಲದೇ ಸಾಲ ಪಡೆದ ರೈತರಿಗೆ ನೋಟಿಸ್ ಕೊಡಬೇಡಿ ಎಂದು ಬ್ಯಾಂಕ್ ಮ್ಯಾನೇಜರ್ಗಳಿಗೆ ಸಿಎಂ ಮನವಿ ಮಾಡಿಕೊಂಡರು. ಸಾಲದ ಮೊತ್ತವನ್ನು ಜುಲೈನಲ್ಲಿ ಪಾವತಿಸುವ ಭರವಸೆ ನೀಡಿದರು.
ಸರ್ಕಾರ ಐದು ವರ್ಷಗಳ ಕಾಲ ಸುಭದ್ರ ಎಂದು ಪುನರುಚ್ಛರಿಸಿದ ಸಿಎಂ, ಸರ್ಕಾರ ಅಸ್ಥಿರಗೊಳಿಸುವ ಮಾಧ್ಯಮಗಳ ವರದಿಗೆ ಕಿವಿಗೊಡಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ತೆರಿಗೆ ಹಣ ಸಂಗ್ರಹದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಉ.ಕ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಕಟುಬದ್ಧ ಇದೆ ಎಂದು ಜನರಿಗೆ ಸಿಎಂ ಅಭಯ ನೀಡಿದರು. ಕನ್ನಡ ಭವನಕ್ಕೆ ಹವಾ ನಿಯಂತ್ರಿತ ವ್ಯವಸ್ಥೆ ಕಲ್ಪಿಸಲು ಒಂದೂವರೆ ಕೋಟಿ ರೂ. ಹಣ ಬಿಡುಗಡೆ ಮಾಡುವುದಾಗಿ ಸಹ ಘೋಷಣೆ ಮಾಡಿದರು.