ಗೋಕಾಕ:ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿ ಉತ್ಸವ ಸಮಿತಿಯಿಂದ ನಾಳೆ ಅಷ್ಠ ದ್ರವ್ಯ ಮಹಾಗಣಪತಿ ಹೋಮ
ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿ ಉತ್ಸವ ಸಮಿತಿಯಿಂದ ನಾಳೆ ಅಷ್ಠ ದ್ರವ್ಯ ಮಹಾಗಣಪತಿ ಹೋಮ
ಗೋಕಾಕ ಸೆ 15 : ಇಲ್ಲಿಯ ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿ ಉತ್ಸವ ಸಮಿತಿಯಿಂದ ನಾಳೆ ಅಷ್ಠ ದ್ರವ್ಯ ಮಹಾಗಣಪತಿ ಹೋಮ , ಪೂರ್ಣಾಹೂತಿ ,108 ವೀರ ಮಹೇಶ್ವರ ಜಂಗಮರಿಗೆ ಪಾದಪೂಜೆ ವಸ್ತ್ರಧಾನ , 501 ಮುತೈದೆರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವದು ಎಂದು ಉತ್ಸವ ಸಮಿತಿಯ ಸದಸ್ಯರು ತಿಳಿಸಿದ್ದಾರೆ
ನಾಳೆ ಮುಂಜಾನೆ ನಗರದ ಶ್ರೀ ವಿಠಲ ರುಕ್ಮೀಣಿ ಮಂದಿರ ಅಂಬಿಗೇರ ಗಲ್ಲಿಯಲ್ಲಿ ಜರಗುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು . ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದ್ಬಕ್ತರು ಆಗಮಿಸಿಬೇಕೆಂದು ವೇದಮೂರ್ತಿ ಶ್ರೀ ವಿಜಯಶಾಸ್ತ್ರಿ ಸ್ವಾಮಿಗಳು ಕೋರಿದ್ದಾರೆ