RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ವಿಶ್ವಕರ್ಮ ಧರ್ಮ ಸಾಂಸ್ಕಂತಿಕ ಪರಂಪರೆಯ ತಳಹದಿಯ ಮೇಲೆ ನಿಂತ ಅತೀ ಪುರಾತನ ಧರ್ಮವಾಗಿದೆ : ಶಾಸಕ ಬಾಲಚಂದ್ರ

ಗೋಕಾಕ:ವಿಶ್ವಕರ್ಮ ಧರ್ಮ ಸಾಂಸ್ಕಂತಿಕ ಪರಂಪರೆಯ ತಳಹದಿಯ ಮೇಲೆ ನಿಂತ ಅತೀ ಪುರಾತನ ಧರ್ಮವಾಗಿದೆ : ಶಾಸಕ ಬಾಲಚಂದ್ರ 

ವಿಶ್ವಕರ್ಮ ಧರ್ಮ ಸಾಂಸ್ಕಂತಿಕ ಪರಂಪರೆಯ ತಳಹದಿಯ ಮೇಲೆ ನಿಂತ ಅತೀ ಪುರಾತನ ಧರ್ಮವಾಗಿದೆ : ಶಾಸಕ ಬಾಲಚಂದ್ರ

ಗೋಕಾಕ ಸೆ 16 : ನಾಡಿನ ಜನತೆಗೆ ವಿಶ್ವಕರ್ಮ ಜಯಂತಿ(ಸೆ.17) ಅಂಗವಾಗಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ.
ಈ ಬಗ್ಗೆ ಭಾನುವಾರ ಸಂಜೆ ಶುಭ ಸಂದೇಶ ನೀಡಿರುವ ಅವರು, ಪ್ರಾಚೀನ ಕಾಲದಿಂದಲೂ ತನ್ನ ಕಲೆಯ ಕಾಯಕ ಯೋಗದ ಮೂಲಕ ವೈಶಿಷ್ಟ್ಯತೆ ಪಡೆದ ವಿಶ್ವಕರ್ಮ ಸಮುದಾಯವು ಆಚಾರ-ವಿಚಾರ, ಸಾಂಪ್ರದಾಯಕ, ಸಾಂಸ್ಕಂತಿಕ ಪರಂಪರೆಯ ತಳಹದಿಯ ಮೇಲೆ ನಿಂತ ಅತೀ ಪುರಾತನ ಧರ್ಮವಾಗಿದೆ. ಕುರುಹುಗಳು ವಿಶ್ವಕರ್ಮಿಯರ ಪ್ರಾಚೀನ ಇತಿಹಾಸವನ್ನು ಗುರುತಿಸುತ್ತವೆ. ಈ ದೇಶದ ಭವ್ಯವೂ, ವೈವಿದ್ಯತೆಯೂ, ರೋಚಕವೂ ಆಗಿದೆ. ಈ ದೇಶದ ಪುರಾತತ್ವ ಮೂಲಾಧಾರಗಳಾದ ಶಾಸನಗಳು, ನಾಣ್ಯಗಳು, ಆಭರಣಗಳು, ಸ್ಮಾರಕಗಳು ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ಇವು ವಿಶ್ವಕರ್ಮಿಯರ ಕುಶಲಕಲೆಯಿಂದ ಮೂಡಿಬಂದ ಕಲಾತ್ಮಕ ವಸ್ತುಗಳಾಗಿದ್ದು, ಇವುಗಳ ನಿರ್ಮಾಣದಲ್ಲಿ ವಿಶ್ವಕರ್ಮರ ಪಾತ್ರ ಗಣನೀಯವಾಗಿದೆ ಎಂದು ಹೇಳಿದ್ದಾರೆ.
ಜಗತ್ತಿಗೆ ಭವ್ಯ ಸಂಸ್ಕಂತಿ, ಇತಿಹಾಸವನ್ನು ನಿರ್ಮಿಸಿಕೊಟ್ಟಿರುವ ವಿಶ್ವಕರ್ಮರು ಈ ದೇಶದ ಸಾಂಸ್ಕøತಿಕ ರಾಯಭಾರಿ ಎಂದು ಪ್ರಶಂಸಿಸಿದ್ದಾರೆ. ವಿಶ್ವಕರ್ಮರ ಪಂಚ ಕುಶಲಕರ್ಮಿಗಳಾದ ಅಕ್ಕಸಾಲಿಗ, ಬಡಿಗ, ಶಿಲ್ಪಿ, ಕಂಬಾರ, ಕಂಚಗಾರರು ನಿರ್ಮಿಸಿಕೊಂಡು ಬಂದಿರುವ ಕುಶಲ ಕಲಾವಸ್ತುಗಳು ಭಾರತೀಯ ಸಾಂಸ್ಕøತಿಕ ಕುರುಹುಗಳಾಗಿವೆ ಎಂದು ಹೇಳಿದ್ದಾರೆ.


ಮೂಲಸ್ಥಂಭ ಪುರಾಣದ ಪ್ರಕಾರ ಒಂದು ಸೂತ್ರದ ಪ್ರಕಾರ ಭೂಮಿ, ಜಲ, ಬೆಳಕು, ಗಾಳಿ ಮತ್ತು ಆಕಾಶ ತ್ರಿಮೂರ್ತಿಗಳು ಯಾವುದೂ ಇಲ್ಲದಿದ್ದಾಗ ಇವನು ತನ್ನನ್ನು, ತನ್ನಿಂದಲೇ ಸೃಷ್ಟಿಸಿಕೊಂಡವನು. ನಂತರ ವೈದಿಕೊತ್ತರ ಮತ್ತು ಬ್ರಹ್ಮಣಗಳ ಅವಧಿಯಲ್ಲಿ ವಿಶ್ವಕರ್ಮ ಪದವು ಋಷಿ ಮತ್ತು ಶಿಲ್ಪಿಯಾಗಿ ಕಾಣಿಸಿಕೊಂಡಿದೆ. ಸೂರ್ಯನ ಏಳು ಕಿರಣಗಳಲ್ಲಿ ಒಂದಕ್ಕೆ ವಿಶ್ವಕರ್ಮವೆಂದು ಕರೆಯಲಾಗುತ್ತಿದೆ. ಸ್ಥಾಪತ್ಯವೇದ, ವಾಸ್ತುಶಾಸ್ತ್ರ ಅಥವಾ 4ನೇ ಉಪದೇಶವನ್ನು ಬಹಿರಂಗಗೊಳಿಸಿದವರು ಹಾಗೂ 64 ಕಲೆಗಳ ಅಧಿಪತಿಯಾದವರು ಈ ಜನಾಂಗದವರೆಂದು ಹೇಳಿರುವ ಅವರು, ವೈದಿಕ ಕಾಲದಲ್ಲಿ ಈ ಪದವು ಇಂದ್ರ, ಸೂರ್ಯ, ಅಗ್ನಿಯರ ಗುಣವಾಚಕವಾಗಿ ಕಾಣಿಸಿಕೊಂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಜನಾಂಗವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಬೇಕಾದ ಅವಶ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

Related posts: