RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ

ಗೋಕಾಕ:ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ 

ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ

ಗೋಕಾಕ ಸೆ 17 : ಸೃಷ್ಠಿಯ ನೀಲನಕ್ಷೆಯ ತಯಾರಕರಾಗಿ ಜಗತ್ತನ್ನು ಸುಂದರಗೊಳಿಸಿ ವಿಶ್ವಕರ್ಮರು, ವಿಶ್ವದ ವಾಸ್ತು ಶಿಲ್ಪಿಗಳಾಗಿದ್ದಾರೆಂದು ಜಿಲ್ಲಾ ಬಿಸಿಯೂಟ ಯೋಜನಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ಸೋಮವಾರದಂದು ನಗರದ ತಾಪಂ ಸಭಾ ಭವನದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತ ಹಾಗೂ ನಗರ ಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶ್ರೀ ವಿಶ್ವಕರ್ಮ ಜಯಂತಿ ಉತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ, ಕಂಬಾರಿಕೆ, ಕುಂಬಾರಿಕೆ,ಶಿಲ್ಪಿಗಳಾಗಿ, ಆಭರಣ ತಯಾರಕರಾಗಿ ಎಲ್ಲ ಕ್ಷೇತ್ರಗಳಲ್ಲಿ ಇವರು ಪ್ರಮುಖ ಪಾತ್ರದಾರಿಗಳಾಗಿ ಶೇಷ್ಟ್ರರಲ್ಲಿ ಶೇಷ್ಟ್ರರಾಗಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಕ್ಕಾನಟ್ಟಿಯ ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆ ಮೇಲೆ ಗ್ರೇಡ್-2 ತಹಶೀಲದಾರ ಎಸ್.ಕೆ.ಕುಲಕರ್ಣಿ, ಶಿಕ್ಷಣ ಇಲಾಖೆಯ ಬಿ.ಎಮ್.ವಣ್ಣೂರ, ಮುಖಂಡರಾದ ರಾಮಚಂದ್ರ ಜಾಂಬೋಟಿ, ರವಿ ಮಾಲದಿನ್ನಿ, ಅಡಿವೆಪ್ಪ ಬಡಿಗೇರ, ಸಂಜು ಸತ್ತಿಗೇರಿ, ದೇವೆಂದ್ರ ಬಡಿಗೇರ, ಸಂತೋಷ ಪತ್ತಾರ, ಅರ್ಜುನ ಬಡಿಗೇರ, ಆನಂದ ಜಾಂಬೋಟಿ, ಪ್ರಕಾಶ ಕಂಬಾರ, ಸದಾಶಿವ ಕಂಬಾರ, ಮಹಾದೇವ ಪತ್ತಾರ, ವಿಠ್ಠಲ ದೇವಣಕರ ಇದ್ದರು. ಸುಕನ್ಯಾ ಸತ್ತಿಗೇರಿ ಸ್ವಾಗತಿಸಿ ವಂದಿಸಿದರು.

Related posts: