RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ

ಗೋಕಾಕ:ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ 

ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ

ಬೆಟಗೇರಿ ಸೆ 17 : ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ದೇವಶಿಲ್ಪಿ ವಿಶ್ವಕರ್ಮನು ಬ್ರಹ್ಮಾಂಡದ ಪ್ರಥಮ ವಾಸ್ತುಶಾಸ್ತ್ರ ಶಿಲ್ಪಾಚಾರ್ಯವಾಗಿದ್ದಾನೆಂದು ಭೋಜರಾಜನು ಗೌರವಿಸಿದ ಐತಿಹ್ಯಗಳಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದ ಮುಖಂಡ ಶ್ರೀಕಾಂತ ಪತ್ತಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದಲ್ಲಿ ಸೋಮವಾರ ಸೆ.17 ರಂದು ಸ್ಥಳೀಯ ವಿಶ್ವಕರ್ಮ ಸಮುದಾಯದವರ ಸಹಯೋಗದಲ್ಲಿ ನಡೆದ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಒಬ್ಬ ದೇವಶಿಲ್ಪಿಯಾಗಿದ್ದಾನೆ. ಬ್ರಹ್ಮಾಂಡ ತುಂಬೆಲ್ಲಾ ವ್ಯಾಪಿಸಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಶಿವಾಜಿ ನೀಲಣ್ಣವರ, ವಿಠಲ ಕೋಣಿ, ಲಕ್ಷ್ಮಣ ಸೋಮನಗೌಡರ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿಶ್ವಕರ್ಮರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆಯ ಕಾರ್ಯಕ್ರಮ ವೈಭವದಿಂದ ನಡೆದ ಬಳಿಕ ಸ್ಥಳೀಯ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮಕ್ಕಳಿಗೆ ಸಿಹಿ ವಿತರಿಸಿದರು.
ಶ್ರೀಶೈಲ ಗಾಣಗಿ, ರಾಮಣ್ಣ ಬಳಿಗಾರ, ಮಲ್ಲಪ್ಪ ಪಣದಿ, ಈರಣ್ಣ ಸಿದ್ನಾಳ, ಪ್ರಕಾಶ ಬಡಿಗೇರ, ಸುರೇಶ ಬಡಿಗೇರ, ಕಾಳಪ್ಪ ಪತ್ತಾರ, ಬಸವರಾಜ ಕೋಣಿ, ಈಶ್ವರ ಬಡಿಗೇರ, ಮಹಾಂತೇಶ ಬಡಿಗೇರ, ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಪಂ ಸದಸ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿಶ್ವಕರ್ಮ ಸಮುದಾಯದ ಹಿರಿಯ ಮುಖಂಡರು, ಯುವಕರು, ಗ್ರಾಮಸ್ಥರು, ಇತರರು ಇದ್ದರು.
ರಾಜು ಪತ್ತಾರ ಸ್ವಾಗಿಸಿದರು, ವೀರನಾಯ್ಕ ನಾಯ್ಕರ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಬಡಿಗೇರ ವಂದಿಸಿದರು.

Related posts: