RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ

ಗೋಕಾಕ:ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ 

ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ

ಬೆಟಗೇರಿ ಸೆ 17 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಸೋಮವಾರ ಸೆ.17 ರಂದು ನಡೆದ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಉಭಯ ಮಾಧ್ಯಮ ಶಾಲೆಗಳ ಆಡಳಿತಾಧಿಕಾರಿ ಚಂದ್ರು ಹಾಲೊಳ್ಳಿ ಮುಖ್ಯ ಅತಿಥಿಗಳಾಗಿ ವಿಶ್ವಕರ್ಮರ ಬದುಕಿನ ಕುರಿತು ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ದೇವಕಿ ಗೌಡ ವಿಶ್ವಕರ್ಮರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆಯ ಕಾರ್ಯಕ್ರಮ ನೆರವೇರಿಸಿದ ಬಳಿಕ ಉಭಯ ಶಾಲೆಗಳ ಮಕ್ಕಳಿಗೆ ಸಿಹಿ ವಿತರಿಸಿದರು.
ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸಂಜು ಮೆಳವಂಕಿ, ಎನ್.ಎ.ಮಿರ್ಜಾನಾಯ್ಕ, ಸಾವಿತ್ರಿ ಹೊಸಟ್ಟಿ, ಎಲ್.ಎ.ಶಿರಹಟ್ಟಿ, ಬಾಳೇಶ ಕೂಟೂರ, ಗಿರಿಗೌಡ ಪಾಟೀಲ, ಸುಮಿತ್ರಾ ಮಾದರ, ವೀಣಾ ಹಿರೇಮಠ, ಗೀತಾ ನಾಯ್ಕ, ನಭಿಸಾಬ ನದಾಫ್, ಸಿದ್ದು ಹಕ್ಕಿ, ಉಭಯ ಮಾಧ್ಯಮ ಶಾಲೆಗಳ ಶಿಕ್ಷಕರು, ಸಿಬ್ಬಂದಿ, ಗ್ರಾಮಸ್ಥರು, ಇತರರು ಇದ್ದರು.

ಕಪರಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಕಪರಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಸೋಮವಾರ ಸೆ.17 ರಂದು ನಡೆದ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮ ವಿಜೃಂಭನೆಯಿಂದ ನಡೆಯಿತು.
ಶಾಲೆಯ ಮುಖ್ಯ ಶಿಕ್ಷಕ ಎಸ್.ಎಸ್.ತಳವಾರ ಪ್ರಾಸ್ತಾವಿಕವಾಗಿ, ಸ್ಥಳೀಯ ವಿಶ್ವಕರ್ಮ ಸಮಾಜದ ಹಿರಿಯರಾದ ವೆಂಕಪ್ಪ ಬಡಿಗೇರ ಮುಖ್ಯ ಅತಿಥಿಗಳಾಗಿ ವಿಶ್ವಕರ್ಮರ ಬದುಕಿನ ಕುರಿತು ಮಾತನಾಡಿದರು. ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ಶ್ರೀಕಾಂತ ಕೌಜಲಗಿ ವಿಶ್ವಕರ್ಮರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆಯ ಕಾರ್ಯಕ್ರಮ ನೆರವೇರಿಸಿದ ಬಳಿಕ ಉಭಯ ಶಾಲೆಗಳ ಮಕ್ಕಳಿಗೆ ಸಿಹಿ ವಿತರಿಸಿದರು.
ಈರಪ್ಪ ಬಡಿಗೇರ, ನಾರಾಯಣ ಬಡಿಗೇರ, ರವೀಂದ್ರ ಬಡಿಗೇರ, ಸುರೇಶ ಪತ್ತಾರ, ಬಸವರಾಜ ಬಡಿಗೇರ, ಮೌನೇಶ ಬಡಿಗೇರ, ರಮೇಶ ಬಡಿಗೇರ, ಆನಂದ ಬಡಿಗೇರ, ಪ್ರಕಾಶ ಪತ್ತಾರ, ಮೌನೇಶ ಎಸ್. ಬಡಿಗೇರ ಸೇರಿದಂತೆ ಶಾಲೆಯ ಎಸ್‍ಡಿಎಮ್‍ಸಿ ಸದಸ್ಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ, ಸ್ಥಳೀಯ ವಿಶ್ವಕರ್ಮ ಸಮಾಜದ ಹಿರಿಯರು, ಯುವಕರು, ಗ್ರಾಮಸ್ಥರು, ಇತರರು ಇದ್ದರು.
ಶಿಕ್ಷಕ ಡಿ.ಎಂ.ನಾಗನೂರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿ.ಎ.ಸವದತ್ತಿ ಕೊನೆಗೆ ವಂದಿಸಿದರು

.

Related posts: