ಗೋಕಾಕ:ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿಯಾಗಿದೆ : ಡಿ.ಎಸ್.ಕುಲಕರ್ಣಿ
ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿಯಾಗಿದೆ : ಡಿ.ಎಸ್.ಕುಲಕರ್ಣಿ
ಗೋಕಾಕ ಸೆ 22 : ದೇವರಿಗಿಂತ ಗುರು ಶ್ರೇಷ್ಠನಾಗಿದ್ದು, ತಂದೆ-ತಾಯಿ ನಂತರದ ಸ್ಥಾನ ಗುರುವಿಗೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್.ಕುಲಕರ್ಣಿ ಹೇಳಿದರು.
ಶನಿವಾರದಂದು ನಗರದ ಲಕ್ಷ್ಮೀ ಏಜುಕೇಶನ ಟ್ರಸ್ಟಿನ ವಿವಿಧ ಅಂಗ ಸಂಸ್ಥೆಗಳು ಹಮ್ಮಿಕೊಂಡ ಗುರು ವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿಯಾಗಿದೆ. ಉತ್ತಮ ನಾಗರೀಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ಶಿಕ್ಷಕರು, ದೇಶ ಕಟ್ಟುವ ಶಿಲ್ಪಿಗಳಾಗಿದ್ದಾರೆಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ, ಅವರ ಉಜ್ವಲ ಭವಿಷ್ಯಕ್ಕೆ ಶ್ರಮಿಸುತ್ತಿರುವುದರಿಂದಲೇ ಸಮಾಜ ಶಿಕ್ಷಕರನ್ನು ಗೌರವ ಭಾವನೆಯಿಂದ ಕಾಣುತ್ತಿದೆ. ಆದರ್ಶ ಗುರುಗಳಾಗಿ ಆದರ್ಶ ಪ್ರಜೆಗಳನ್ನು ದೇಶಕ್ಕೆ ನೀಡಿ ಗುರುವಿನ ಸ್ಥಾನದ ಮಹತ್ವವನ್ನು ಹೆಚ್ಚಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಬಿ. ಪಡನಾಡಿ, ಪ್ರೀತಿ ತುರಾಯಿದಾರ, ವಿ.ಬಿ.ಕಣಿಲದಾರ ಅವರನ್ನು ಸತ್ಕರಿಸಲಾಯಿತು. ಅಧ್ಯಕ್ಷತೆಯನ್ನು ಟ್ರಸ್ಟಿನ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ ವಹಿಸಿದ್ದರು.
ವೇದಿಕೆ ಮೇಲೆ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಬಿ.ಕೆ.ಕುಲಕರ್ಣಿ, ಎಚ್.ವಿ.ಪಾಗನೀಸ್, ಪಿ.ವಿ.ಚಚಡಿ, ಆಯ್.ಎಸ್.ಪವಾರ, ಎಸ್.ಎಮ್.ನದಾಫ, ಎನ್.ಎಮ್.ತೋಟಗಿ, ಎನ್.ಕೆ.ಮಿರಾಸಿ, ಪಿ.ಡಿ.ಪಂಚಾಳ, ಅವಿನಾಶ ಭಜಂತ್ರಿ ಇದ್ದರು. ಶಿಕ್ಷಕಿ ಸವಿತಾ ಬಡಿಗೇರ ಸ್ವಾಗತಿಸಿ ವಂದಿಸಿದರು.