ಗೋಕಾಕ:ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿ ತರಬೇತಿ ಶಿಬಿರ
- ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿ ತರಬೇತಿ ಶಿಬಿರ
ಗೋಕಾಕ ಸೆ 25 : ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ಮಾಡಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದೆ ಎಂದು ರೋಟರಿ ಮಾಜಿ ಜಿಲ್ಲಾ ಪ್ರಾಂತಪಾಲ ಶ್ರೀನಿವಾಸ ಮಾಲಾ ಹೇಳಿದರು.
ಮಂಗಳವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ರೋಟರಿ ಸಂಸ್ಥೆ ಗೋಕಾಕ ಹಾಗೂ ಹುಬ್ಬಳಿ ದಕ್ಷಿಣ, ಬೆಳಗಾವಿ ಮತ್ತು ಚಿಕ್ಕೋಡಿ ರೋಟರಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರೋಟರಿ ಜಾಗತಿಕ ಪ್ರತಿಷ್ಠಾನದ ಅನುದಾನಯಡಿಯಲ್ಲಿ ಹಮ್ಮಿಕೊಂಡ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರೋಟರಿ ಸಂಸ್ಥೆ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಶಾಲೆಗಳಿಗೆ ಡೆಸ್ಕ್, ಶೌಚಾಲಯಗಳ ನಿರ್ಮಾಣ, ವಿದ್ಯಾರ್ಥಿಗಳಿಗೆ ಅವಶ್ಯಕ ವಸ್ತುಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ವೇದಿಕೆ ಮೇಲೆ ರೋಟರಿ ಮಾಜಿ ಜಿಲ್ಲಾ ಪ್ರಾಂತಪಾಲ ಬ್ರಾಜೀಲ್ ಡಿ.ಸೋಜಾ, ಇಲ್ಲಿಯ ರೋಟರಿ ಸಂಸ್ಥೆಯ ಅಧ್ಯಕ್ಷ ದಿಲೀಪ ಮೆಳವಂಕಿ, ಯೋಜನಾ ಚೇರಮನ್ ಜಗದೀಶ ಚುನಮರಿ, ತರಬೇತುದಾರರಾದ ಅನೀಲ ಜೈನ್, ಅರವಿಂದ ಕುಲಕರ್ಣಿ, ಮಹಾಂತೇಶ ಸಜ್ಜನ ಇದ್ದರು.
ಸತೀಶ ನಾಡಗೌಡ ಸ್ವಾಗತಿಸಿದರು, ರಾಜು ಮುನವಳ್ಳಿಮಠ ನಿರೂಪಿಸಿದರು, ಸತೀಶ ಬೆಳಗಾವಿ ವಂದಿಸಿದರು.