ಗೋಕಾಕ:ಗೋಕಾಕದಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆ
ಗೋಕಾಕದಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆ
ಗೋಕಾಕ ಸೆ 25 : ಒಂದು ತಿಂಗಳಿನಿಂದ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಸಾಯಂಕಾಲ ಏಕಾಏಕಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯೂ ನಗರದದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರಿಯಿತು.
ಸಂಜೆ ಸುರಿದ ಭಾರಿ ಮಳೆಗೆ ಇಲ್ಲಿಯ ಅಂಬೇಡ್ಕರ್ ನಗರದ ಪಾಯ ಸಾಗರ ಶಾಲೆಯ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬದ ಮೇಲೆ ಗಿಡದ ಟೊಂಗಿಯೊಂದು ಬಿದ್ದ ಪರಿಣಾಮ ಕಾರೊಂದು ಜಖಂಗೊಂಡಿದೆ . ಯಾವುದೆ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ .
ವಿಷಯ ತಿಳಿದು ಶೀಘ್ರವಾಗಿ ಸ್ಥಳಕ್ಕೆ ದಾವಿಸಿದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತಗೋಳಿಸಿ ಕಂಬ ಮತ್ತು ಗಿಡದ ಟೊಂಗಿಗಳನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರ ಮುಕ್ತ ಗೊಳಿಸಿದ್ದಾರೆ .