ಘಟಪ್ರಭಾ:ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆ
ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆ
ಘಟಪ್ರಭಾ ಸೆ 25 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ದಿನಾಂಕ 25 ರಂದು ಮೂಡಲಗಿಯ ಶ್ರೀನಿವಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮೂಡಲಗಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಧನೆಯನ್ನು ಗೈದು 07 ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ಪ್ರವೀಣ ಮ. ಹೊಸೂರ ಕನ್ನಡ ಕಂಠಪಾಠ ಪ್ರಥಮ, ಬಾಳೇಶ ಸಿ. ಜಟ್ಟೆನ್ನವರ ಕಥೆ ಹೇಳುವುದು ಪ್ರಥಮ, ಐಶ್ವರ್ಯಾ ಕರೆಪ್ಪ ಕೊಡ್ಲಿ ಇಂಗ್ಲೀಷ ಕಂಠಪಾಠ ಪ್ರಥಮ, ಪ್ರಕಾಶ ಲ. ಯಾದಗೂಡ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ, ಲಕ್ಷ್ಮೀ ಸ. ಮಗದುಮ ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ, ಸೃಷ್ಠಿ ಗ. ಹೊಸೂರ ಲಘು ಸಂಗೀತ ದ್ವಿತೀಯ, ಸ್ಥಾನವನ್ನು ಗಳಿಸಿ 03 ಸ್ಪರ್ಧೇಗಳಲ್ಲಿ ಜಿಲ್ಲಾ ಹಂತಕ್ಕೆ ಆಯ್ಕೆಯಾಗಿದ್ದಾರೆ. ಈ ಮಕ್ಕಳಿಗೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ.ಸಿ ಗಂಗಾಧರ ಅವರು ಶುಭ ಕೋರಿ ಜಿಲ್ಲಾ ಹಂತದಲ್ಲಿಯೂ ವಿಜಯ ದೊರೆಯಲಿ. ಪರಿಶ್ರಮದ ಮೂಲಕ ಗೆಲುವಿನ ಅಭಿಯಾನವನ್ನು ಜಿಲ್ಲಾ ಹಂತದಲ್ಲಿಯೂ ಮುಂದುವರೆಸಿ ಮೂಡಲಗಿ ತಾಲೂಕಿನ ಕೀರ್ತಿ ಪತಾಕೆಯನ್ನು ಹಾರಿಸಿರಿ ಎಂದು ಹಾರೈಸಿದರು. ರಾಜಾಪುರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ಮೂಶಪ್ಪಗೋಳ ಇದ್ದರು.
ಈ ಅಪೂರ್ವ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ತರಬೇತಿ ನೀಡಿದ ಶಾಲೆಯ ಪ್ರಧಾನ ಗುರುಗಳಿಗೆ, ಗುರು ಮಾತೆಯರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಪುತ್ರ ಲ. ಗುಂಡಪ್ಪಗೋಳ, ಆಡಳಿತ ಮಂಡಳಿಯ ಸದಸ್ಯರು, ಪ್ರಧಾನ ಗುರುಮಾತೆ ಶಾಮಲಾ ಬಡಿಗೇರ, ಹಿರಿಯರಾದ ವಿಠ್ಠಲ್ ಪಾಟೀಲ್, ಬಸವಂತ ಕಮತಿ, ರಾಜು ಬೈರುಗೋಳ. ಶ್ರೀಮತಿ ಕಸ್ತೂರಿ ಬ. ಕಮತಿ, ಶ್ರೀಮತಿ ಸಂಗೀತಾ ಯಕ್ಕುಂಡಿ, ಬೈರಪ್ಪಾ ಯಂಕ್ಕುಂಡಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಗುಂಡಪ್ಪಗೋಳ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ದೊಡ್ಡವ್ವ ವಗ್ಗ, ಸದಸ್ಯರು ಸೇರಿದಂತೆ ಶಾಲೆಯ ಪಾಲಕರು-ಪೋಷಕರು ಗ್ರಾಮದ ಗುರು-ಹಿರಿಯರು ಎಲ್ಲ ಮಕ್ಕಳಿಗೆ ಹಾರೈಸಿ ಈ ಗೆಲುವಿನ ಅಭಿಯಾನ ರಾಜ್ಯ ಮಟ್ಟದ ವರೆಗೆ ಮುಂದುವರೆಯಲೆಂದು ಆಶಿರ್ವದಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.