ಖಾನಾಪುರ:ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ
ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ
ಖಾನಾಪುರ ಜೂ 16: ತಾಲೂಕಿನ ಭೀಮಗಡ ಅಭಯಾರಣ್ಯ ವೀಕ್ಷಿಸಲು ಸ್ವಾಮೀಜಿಗಳ ತಂಡ ಗುರುವಾರ ಹೆಮ್ಮಡಗಾಕ್ಕೆ ಆಗಮಿಸಿತ್ತು. ಗದಗ ತೋಟದಾರ್ಯ ಡಾ.ಸಿದ್ದಲಿಂಗ ಸ್ವಾಮೀಜಿ,ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ,ನಿಡಸೋಸಿ ಸ್ವಾಮೀಜಿ,ಕಿತ್ತೂರ ಕಲ್ಮಠ ಸ್ವಾಮೀಜಿ ಇದ್ದರು. ಅರಣ್ಯಾಧಿಕಾರಿ ಡಿಎಫ್‍ಒ ಬಿ.ವಿ.ಪಾಟೀಲ,ಖಾನಾಪುರ ಎಸಿಎಫ್ ಸಿ.ಬಿ.ಪಾಟೀಲ,ಲೋಂಡಾ ಆರ್‍ಎಫ್‍ಒ ಬಸವರಾಜ ವಾಳದ ಉಪಸ್ಥಿತರಿದ್ದರು.
ದೇಗಾಂವ ಬಳಿ ಮಹದಾಯಿ ಉಗಮ ಸ್ಥಾನ ದೇಗಾಂವ ಮತ್ತು ತಳೆವಾಡಿ ಬಳಿ ಉಪನದಿ ಪನಸೇರಗೆ ಬೇಟಿ ನೀಡಿದರು. ಭೀಮಗಡ ಬಾವಲಿ ಗುಹೆ ಮತ್ತು ಭೀಮಗಡ ಸುತ್ತಲಿನ ಅರಣ್ಯ ವೀಕ್ಷಿಸಿದರು. ಇಲ್ಲಿಯ ಅಭಯಾರಣ್ಯದಲ್ಲಿ ವನ್ಯಜೀವಿ ಸಂತತಿ ಇದ್ದು ಮಲೆನಾಡ ಅನುಭವ ನಮಗೆ ಆಗಿದೆ. ಸಾಕಷ್ಟು ಪ್ರಾಣಿಗಳನ್ನು ಪ್ರತ್ಯ್ಕ್ಷವಾಗಿ ನೋಡುವ ಅನುಭವ ನಮಗಾಗಿದೆ. ಇಲ್ಲಿ ಜಗತ್ತಿನ ವಿಶಿಷ್ಟ ಬಳಿÀ ಕುತ್ತಿಗೆ ಬಾವಲಿಗಳು ಇದ್ದು ಅಭಯಾರಣ್ಯ ನಿರ್ಮಾಣಕ್ಕೆ ಇದು ಕೂಡ ಕಾರಣವಾಗಿದೆ ಎಂದು ತಮ್ಮ ಅಭಿಪ್ರಾಯ ಜೋತೆಗೆ ಇದ್ದ ಅಧಿಕಾರಿಗಳೊಂದಿಗೆ ಹಂಚಿ ಕೊಂಡರು.
ಕಪ್ಪತಗುಡ್ಡ ಅಭಯಾರಣ್ಯವಾಗಿಸಲು ಅಲ್ಲಿಯ ಖನಿಜ ಸಂಪತ್ತು ಅನ್ಯರ ಪಾಲಾಗುವದನ್ನು ತಪ್ಪಿಸಲು ಇಲ್ಲಿಯ ಪರಿಸ್ಥಿತಿ ತಿಳಿದು ಇದೇ ಮಾದರಿಯಲ್ಲಿ ಕಪ್ಪತಗುಡ್ಡ ಬೆಳೆಸುವ ಅತ್ಯವಿದೆ ಎಂದರು.
ನಂತರ ಹೆಮ್ಮಡಗಾ ಪ್ರಕೃತಿ ಶಿಬಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಮಠಾಧೀಶರು ಕಪ್ಪತಗುಡ್ಡ ರಕ್ಷತಾರಣ್ಯಕ್ಕೆ ಸೀಮಿತಗೊಳಿಸದೆ ಅದನ್ನು ಅಭಯಾರಣ್ಯಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವದಾಗಿ ಹೇಳಿದರು. ಗದಗ ಡಂಬಳ ತೊಂಟದಾರ್ಯ ಡಾ.ಸಿದ್ದಲಿಂಗ ಸ್ವಾಮೀಜಿ ಅಭಯಾರಣ್ಯ ಮಾದರಿಯಲ್ಲಿ ಕಪ್ಪತಗುಡ್ಡ ನಿರ್ಮಾಣವಾಗ ಬೇಕು ಎಂದರು. ರಕ್ಷತಾರಣ್ಯ ಮತ್ತು ಅಭಯಾರಣ್ಯ ಕಾನೂನುಗಳು ಬೇರೆಯಾಗಿದ್ದು ಇಲ್ಲಿ ಬಂದ ನಂತರ ಕಂಡುಬಂದದೆ. ಕಪ್ಪತಗುಡ್ಡ 18 ಖನಿಜ ಪದಾರ್ಥಗಳು ಅಲ್ಲಿವೆ. 150 ದಿವ್ಯ ಜೌಷಧಿ ಸಸಿಗಳು ಇದ್ದು ಹಿಮಾಲಯ ಬಿಟ್ಟರೆ ಕಪ್ಪತಗುಡ್ಡದಲ್ಲಿ ಮಾತ್ರ ಸಿಗುತ್ತದೆ ಎನ್ನುವದು ಕೇರಳ ಭಾಗದ ವೈಧ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಇಲ್ಲಿಯ ಸಸಿಗಳು ಚೀನಾಕ್ಕೆ ಬೊಜ್ಜು ಇಳಿಸುವ ಜೌಷಧಿ ಸಿದ್ದ ಪಡಿಸಲು ಕಳ್ಳತನದಿಂದ ಸಾಗಿಸಲಾಗುತ್ತಿದೆ. ಕಪ್ಪತಗುಡ್ಡ ಉಳುವಿಗಾಗಿ ಹೋರಾಟ ನಡೆಸಿದ್ದಕ್ಕೆ 40 ಸಾವಿರ ಹೆಕ್ಟರ ಅರಣ್ಯ ರಕ್ಷತಾರಣ್ಯ ಘೋಷಣೆಯಾಗಿದೆ. ಇನ್ನು 40 ಸಾವಿರ ಹೆಕ್ಟರ ಅರಣ್ಯ ಕೂಡ ರಕ್ಷತಾರಣ್ಯ ಎಂದು ಘೋಷಿಸ ಬೇಕು. ಕಪ್ಪತಗುಡ್ಡ ಪ್ರದೇಶದಲ್ಲಿ ಪರಿಸರ ವಿಶ್ವವಿದ್ಯಾಲಯ ಆರಂಬಿಸಲು ಸರ್ಕಾರಕ್ಕೆ ಒತ್ತಾಯಿಸುವದಾಗಿ ಹೇಳಿದರು. ಮಹದಾಯಿ ನದಿ ವಿವಾದ ಹಲವಾರು ವರ್ಷದಿಂದ ರಾಜಕಾರಣಿಗಳ ನಿರ್ಲಕ್ಷತನದಿಂದ ಸಮಸ್ಯೆ ಪರಿಹಾರವಾಗಿಲ್ಲ. ರಾಜಕಾರಣಿಗಳ ಇದನ್ನು ರಾಜಕೀಯ ದಾಳವಾಗಿ ಬಳಿಸಿ ಕೊಳ್ಳುತ್ತಿದೆ. ಹುಬ್ಬಳ್ಳಿ ಧಾರವಾಡ 5 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಸಮಸ್ಯೆ ಇದೆ. 4 ಜಿಲ್ಲೆ ಮತ್ತು 19 ತಾಲೂಕಿಗೆ ನೀರಿನ ಸಮಸ್ಯೆ ಪರಿಹರಿಸಲು ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕಿದೆ ಎಂದರು.
ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪುಜ್ಯ ಸಿದ್ದರಾಮ ಸ್ವಾಮೀಜಿ ಮಾತನಾಡಿ ಕಪ್ಪತಗುಡ್ಡ ಪರಿಸರ ಉಳಿಸಲು ಗಣಿಗಾರಿಕೆ ತಡೆಯುವಲ್ಲಿ ಬಹುದೊಡ್ಡ ಹೋರಾಟವಾಗಿದೆ. ಅಲ್ಲಿಯ ಪರಿಸರ ಉಳಿಸುವ ಕಾಳಜಿ ಮುಂದಿನ ಪಿಳಿಗೆಗೆ ಮನವರಿಕೆಮಾಡಿಕೊಡಬೇಕಿದೆ. ನೆಲ ಜಲ ವಾಯು ಮಾಲಿನ್ಯ ಪರಿಸರ ಮಾಲಿನ್ಯ ತಡೆಬೇಕಲ್ಲದೆ ಅರಣ್ಯ ಬೆಳೆಸುವ ಕೆಲಸ ಸನ್ಯಾಸಿಗಳು ಮಾಡಬೇಕಿದೆ. ಅಕ್ಕಮಹಾದೇವಿ ವಚನ ಸಾಹಿತ್ಯದಲ್ಲಿ ಪರಿಸರ ವನ್ಯಜೀವಿಗಳ ಕಾಳಜಿ ಹೆಚ್ಚು ಎದ್ದು ಕಾಣಿಸುತ್ತದೆ ಎಂದರು.