RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ರಕ್ತದಾನ ಮಾಡುವ ಮನುಷ್ಯ ಆರೋಗ್ಯವಂತ ವಿರುತ್ತಾನೆ : ಡಾ| ಚಂದ್ರಶೇಖರ ಹೊಸಪೇಟ

ಘಟಪ್ರಭಾ:ರಕ್ತದಾನ ಮಾಡುವ ಮನುಷ್ಯ ಆರೋಗ್ಯವಂತ ವಿರುತ್ತಾನೆ : ಡಾ| ಚಂದ್ರಶೇಖರ ಹೊಸಪೇಟ 

ರಕ್ತದಾನ ಮಾಡುವ ಮನುಷ್ಯ ಆರೋಗ್ಯವಂತ ವಿರುತ್ತಾನೆ : ಡಾ| ಚಂದ್ರಶೇಖರ ಹೊಸಪೇಟ

ಘಟಪ್ರಭಾ ಸೆ 26 : ರಕ್ತದಾನ ಮಾಡುವ ಮನುಷ್ಯ ಆರೋಗ್ಯವಂತನಾಗಿರುತ್ತಾರೆ. ರಕ್ತದಾನ ಮಹಾದಾನವಾಗಿದೆ. ಈ ನಿಟ್ಟಿನಲ್ಲಿ ಯುವಕರು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕೆಂದು ಬೆಳಗಾವಿಯ ಬಿಮ್ಸ್ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ| ಚಂದ್ರಶೇಖರ ಹೊಸಪೇಟ ಕರೆ ನೀಡಿದರು.
ಅವರು ಬುಧವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ವಿಠ್ಠಲ ದೇವಸ್ಥಾನದ ಸಮುದಾಯ ಭವನದಲ್ಲಿ ಜಿ.ಪಂ ಬೆಳಗಾವಿ, ತಾ.ಪಂ ಗೋಕಾಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗೋಕಾಕ, ಗ್ರಾಮ ಪಂಚಾಯತ ಶಿಂದಿಕುರಬೇಟ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಿಯಮಿತ ರಕ್ತದಾನ ಮಾಡುವ ಮೂಲಕ ಹೃದಯಾಘಾತ ಸಂಭವ ಮತ್ತು ರಕ್ತದಲ್ಲಿ ಕೊಬ್ಬಿನಂಶ ಕಡಿಮೆಯಾಗುತ್ತದೆ.ರಕ್ತ ಕೊಟ್ಟ 24 ಗಂಟೆಯಲ್ಲಿ ಮತ್ತೇ ಶರೀರದಲ್ಲಿ ರಕ್ತ ಉತ್ಪತ್ತಿಯಾಗುತ್ತದೆ. ರಕ್ತ ನೀಡುವ ಮೂಲಕ ಯಾವುದೇ ಕಾಯಿಲೆಗಳು ಬರುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ ವಹಿಸಿದ್ದರು. ವೇದಿಕೆ ಮೇಲೆ ಗ್ರಾ.ಪಂ ಉಪಾಧ್ಯಕ್ಷೆ ಭೀಮವ್ವ ಭಜಂತ್ರಿ, ಜಿ.ಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ, ಡಾ| ಆರ್.ಎಸ್.ಬೆಣಚಿನಮರಡಿ, ಡಾ| ಪ್ರವೀಣ ಕರಗಾಂವಿ, ಆಡಳಿತಾಧಿಕಾರಿ ಡಾ| ಆರ್.ಜಿ.ಹೊರಟ್ಟಿ, ಎಸ್.ಕೆ.ರಜಪೂತ, ಪಿ.ಕೆ.ಕುದರಿ, ಜಿ.ಎಸ್.ಡಾಂಗೆ, ಎಸ್.ಬಿ.ಕಾಳ್ಯಾಗೋಳ, ಬಿ.ಬಿ.ಬೀಳಗಿ, ಪಿಡಿಓ ಎಂ.ಡಿ.ಸರಕಾವಸ, ಎಸ್.ಎಂ.ಅಂಗಡಿ, ಬಸನಗೌಡ ಈಶ್ವರಪ್ಪಗೋಳ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.

Related posts: