ಬೆಳಗಾವಿ:ಶಾಸಕ ಸತೀಶ ಬೆಂಬಲಿಗನಿಗೆ ಹೆಬ್ಬಾಳ್ಕರ ಬೆಂಬಲಿಗನಿಂದ ಚಾಕು ಇರಿತ ಪ್ರಕರಣ ದಾಖಲು
ಹಲ್ಲೆಗೊಳಗಾದ ಆಸೀಪ ಮುಲ್ಲಾ
ಶಾಸಕ ಸತೀಶ ಬೆಂಬಲಿಗನಿಗೆ ಹೆಬ್ಬಾಳ್ಕರ ಬೆಂಬಲಿಗನಿಂದ ಚಾಕು ಇರಿತ ಪ್ರಕರಣ ದಾಖಲು
ಬೆಳಗಾವಿ ಸೆ 28 : ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿತ ಕಾರ್ಯಕರ್ತನಿಗೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಬೆಂಬಲಿತ ಕಾರ್ಯಕರ್ತ ಮಾರಿಹಾಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತೌಶೀಪ ಫನಿಬಂಧ ತಲವಾರನಿಂದ ದಾಳಿ ಮಾಡಿರುವ ಘಟನೆ ನಡೆದಿದೆ
ಬೆಳಗಾವಿಯ ಮಾರಿಹಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸತೀಶ್ ಜಾರಕಿಹೊಳಿ ಬೆಂಬಲಿಗ ಆಸಿಫ್ ಮುಲ್ಲಾ ಮೇಲೆ ಚಾಕು ಇರಿದು ಆತನ ಹತ್ಯೆಗೆ ಯತ್ನ ನಡೆಸಲಾಗಿದೆ. ಇನ್ನು ಗಾಯಗೊಂಡಿರುವ ವ್ಯಕ್ತಿಯನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ತೌಶೀಫ್ ಫಣಿಬಂದ ಮಾರಿಹಾಳ ಗ್ರಾಪಂ ಉಪಾಧ್ಯಕ್ಷನಾಗಿದ್ದಾನೆ. ಇನ್ನು ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಗೆ ಶಾಸಕ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸಿದರು. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು
ಆರೋಪಿ ತೌಶೀಪ್ ಫಣಿಬಂದ್ ಬಂಧನಕ್ಕೆ ಬಲೆ ಬೀಸಿದ್ದಾರೆ