ಘಟಪ್ರಭಾ:ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಯೋಜನೆಯಲ್ಲಿ ಅರ್ಜಿ ಆಹ್ವಾನ
ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಯೋಜನೆಯಲ್ಲಿ ಅರ್ಜಿ ಆಹ್ವಾನ
ಘಟಪ್ರಭಾ ಸೆ 28 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸನ್ 2018-19 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಯೋಜನೆಯಲ್ಲಿ ಕಚ್ಚಾ/ಅರೆ ಕಚ್ಚಾ ಮನೆಗಳ ನಿರ್ಮಿಸಲು ಅರ್ಜಿ ಕರೆಯಲಾಗಿದೆ.
21 ಚ.ಮೀ ಗಿಂತ ಕಡಿಮೆ ಕಾರ್ಪೇಟ ಏರಿಯಾ ಇರುವ ಪಕ್ಕಾ ಮನೆ ಹೊಂದಿರುವ ಕುಟುಂಬವು ಒಂದು ಕೋಣೆ ಅಥವಾ ಒಂದು ಅಡುಗೆ ಮನೆ, ಸ್ನಾನದ ಮನೆ, ಶೌಚಾಲಯ ಅಥವಾ ಸ್ನಾನದ ಮನೆ ಹೀಗೆ ವಿವಿಧ ಸಂಯೋಜನೆ ಯೊಂದಿಗೆ ಕನಿಷ್ಠ 9 ಚಮೀ ವಿಸ್ತರಿಸಲು ಕೇಂದ್ರ ಸರ್ಕಾರವು 1.5 ಲಕ್ಷ ಅನುದಾನ ನೀಡುವುದಕ್ಕಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಹಾಗೂ ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆಯಡಿ ಇ.ಡಬ್ಲೂ.ಎಸ್, ಎಲ್.ಐ.ಜಿ, ಎಂ.ಐ.ಜಿ ವರ್ಗದ ಕುಟುಂಬಗಳಿಗೆ ಮನೆಗಳ ನಿರ್ಮಾಣಕ್ಕಾಗಿ ಬ್ಯಾಂಕಗಳು ಸಾಲ ಸೌಲಭ್ಯ ಬ್ಯಾಂಕಗಳು ಸಾಲ ಸೌಲಭ್ಯ ಒದಗಿಸುತ್ತಿದ್ದು ಕೇಂದ್ರ ಸರ್ಕಾರದ ಬಡ್ಡಿ ಸಹಾಯಧನ ಒದಗಿಸಲಿದೆ ಅಂತಾ ಈ ಮೂಲಕ ತಿಳಿಸಲಾಗಿದೆ.
ಅರ್ಜಿ ಸ್ವೀಕರಿಸಲು ಕೊನೆಯ ದಿ.20-10-2018 ರಂದು ಸಾಯಂಕಾಲ 5-00 ಘಂಟೆಗೆ ನಿಗದಿಪಡಿಸಿದ್ದು, ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.