RNI NO. KARKAN/2006/27779|Thursday, November 21, 2024
You are here: Home » breaking news » ಘಟಪ್ರಭಾ:ದಿ.13 ರಿಂದ ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿ

ಘಟಪ್ರಭಾ:ದಿ.13 ರಿಂದ ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿ 

ದಿ.13 ರಿಂದ ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿ

ಘಟಪ್ರಭಾ ಸೆ 30 : ನಗರದಲ್ಲಿ ಐದನೆ ಬಾರಿಗೆ ಐ.ಪಿ.ಎಲ್ ಮಾದರಿಯಲ್ಲಿ (ಜಿ.ಪಿ.ಎಲ್) “ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿಯನ್ನು ಇಲ್ಲಿಯ ಎಸ್.ಡಿ.ಟಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.
ಜಿ.ಪಿ.ಎಲ್ ಪಂದ್ಯಾವಳಿಗಳು ದಿ.13 ರಿಂದ ಪ್ರಾರಂಭಗೊಳ್ಳಲಿದ್ದು, ಏಳು ಪ್ರಾಯೋಜಕರು, ಏಳು ತಂಡುಗಳು ಹಾಗೂ 91 ಆಟಗಾರರು ಭಾಗವಹಿಸಲಿದ್ದಾರೆ. ಸ್ಥಳೀಯ ಬಡ ಪ್ರತಿಭೆಗಳನ್ನು ಗುರುತಿಸುವ ಉದ್ದೇಶಕ್ಕಾಗಿ ಸ್ಥಳೀಯ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಸವೇಶ್ವರ ಕ್ರಿಕೇಟ್ರ್ಸ್, ಸೂರ್ಯ ಕ್ರಿಕೇಟ್ರ್ಸ್, ರೆಡ್‍ಲಾಯಿನ್ಸ್ ಘಟಪ್ರಭಾ, ಮಲ್ಲಾಪೂರ ಬುಲ್ಸ್, ಡಿ.ಎಂ.ಡ್ರ್ಯಾಗನ್ಸ್, ಆರ್.ಎಸ್.ಕಿಂಗ್ಸ್ ಹಾಗೂ ಗುಡ್ಡಿ ಪ್ಯಾಂಥರ್ಸ ತಂಡಗಳು ಭಾಗಿಯಾಗಲಿವೆ.
ಪಂದ್ಯಾವಳಿಗಳನ್ನು ಕಟ್ಟು ನಿಟ್ಟಾಗಿ ನಡೆಸಲು ಮೂರನೆ ನಿರ್ಣಾಯಕ (ಥರ್ಡ್ ಅಂಪಾಯರ್) ವ್ಯವಸ್ಥೆಯನ್ನು ಗೋಕಾಕದ ಕಿಶೋರ ಭಟ್ಟ ಇವರಿಂದ ಮಾಡಲಾಗಿದ್ದು, ಕ್ರೀಢಾಂಗಣದ ಸುತ್ತ 8 ಕ್ಯಾಮರಗಳನ್ನು ಅಳವಡಿಸಲಾಗುತ್ತಿದೆ.
ವಿಜೇತರಿಗೆ ಪ್ರಥಮ ಬಹುಮಾನವಾಗಿ ಗೋಕಾಕದ ಖ್ಯಾತ ಉದ್ಯಮಿ ಲಖನ ಲ.ಜಾರಕಿಹೊಳಿ ಅವರಿಂದ 50,000/ರೂ ಹಾಗೂ ಒಂದು ಆಕರ್ಷಕ ಟ್ರೋಫಿ, ಪ್ರಥಮ ದರ್ಜೆ ಗುತ್ತಿಗೆದಾರ ಜಯಶೀಲ ಶೆಟ್ಟಿ ಇವರಿಂದ ದ್ವಿತೀಯ ಬಹುಮಾನವಾಗಿ 25,000/ರೂ ಹಾಗೂ ಒಂದು ಆಕರ್ಷಕ ಟ್ರೋಫಿ, ಉದ್ಯಮಿದಾರರಾದ ಹಣುಮಂತ ಗಾಡಿವಡ್ಡರ ಇವರಿಂದ ತೃತೀಯ ಬಹುಮಾನವಾಗಿ 15,000/ರೂ ಹಾಗೂ ಒಂದು ಆಕರ್ಷಕ ಟ್ರೋಫಿ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅಲ್ತಾಫ ಉಸ್ತಾದ ಇವರಿಂದ ಸರಣಿ ಶ್ರೇಷ್ಠ ಬಹುಮಾನವನ್ನು ನೀಡಲಾಗುವುದು.
ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಪ್ರಗತಿಪರ ರೈತರಿಗೆ ಟೀಮ ಮಾಲೀಕರು ಹಾಗೂ ಕಮೀಟಿ ವತಿಯಿಂದ ಸನ್ಮಾನಿಸಲಾಗುವುದು ಎಂದು ಪ್ರಾಯೋಜಕರಾದ ನವೀನ ಹೊಸಮನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: